ಕೆಯುಡಬ್ಲ್ಯೂಜೆಯಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ.

Promotion

ಬೆಂಗಳೂರು,ಜುಲೈ,23,2022(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್‌ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳಿಗೆ ತಾಲ್ಲೂಕು ಮಟ್ಟದಲ್ಲಿ, ಶೇ.80ಕ್ಕೂ ಹೆಚ್ಚು ಅಂಕ ಪಡೆದವರಿಗೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. (ಕಾರ್ಯಕ್ರಮ ಮಾಡದಿದ್ದಲ್ಲಿ ಈ ಬಗ್ಗೆ ಸಂಘಕ್ಕೆ ವರದಿಯನ್ನು ಕಳುಹಿಸಿಕೊಡಬೇಕು) ರಾಜ್ಯ ಮಟ್ಟದಲ್ಲಿಯೂ ಇದೇ ರೀತಿಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ‌ಪಡೆದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಗಸ್ಟ್ ನಲ್ಲಿ ಏರ್ಪಡಿಸಲಾಗುವುದು.

ಈ ಬಗ್ಗೆ ಪ್ರತಿ ಜಿಲ್ಲೆಯಿಂದಲೂ ಶೇ.90 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರು ವಿವರಗಳನ್ನು ಅವರ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್ ಜೆರಾಕ್ಸ್ ಸಹಿತ ಅರ್ಜಿ ಬರೆದು ದಿನಾಂಕ: 30.07.2022 ರೊಳಗೆ ರಾಜ್ಯ ಸಂಘಕ್ಕೆ ಕಳುಹಿಸಿಕೊಡುವಂತೆ ತಿಳಿಸಿದೆ.  (ವಾಟ್ಸಪ್ ಮೂಲಕ ಕಳುಹಿಸಿದರೆ ಪರಿಗಣಿಸುವುದಿಲ್ಲ)

ಮಾಹಿತಿ ಕಳುಹಿಸಿಕೊಡಬೇಕಾದ ವಿಳಾಸ:

ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ),

3ನೇ ಮಹಡಿ,

ಕಂದಾಯ ಭವನ,

ಕೆಜಿ ರಸ್ತೆ,

ಬೆಂಗಳೂರು-09

Key words: Journalists- SSLC-PUC-Children –KUWJ- Award.