ಕೋವಿಡ್ ಗೆ ಬಲಿಯಾದ ಪತ್ರಕರ್ತ ಸುರೇಶ್ ಅವರ ಕುಟುಂಬಕ್ಕೆ 5 ಲಕ್ಷ.ರೂ ಪರಿಹಾರ ಮಂಜೂರು…

Promotion

ಬೆಂಗಳೂರು,ನವೆಂಬರ್,12,2020(www.justkannada.in): ಕೋವಿಡ್ ಗೆ ಬಲಿಯಾದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಪ್ರಭ ವರದಿಗಾರ ಸಿಂ.ಕ.ಸುರೇಶ್  ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.kannada-journalist-media-fourth-estate-under-loss

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಮಾಡಿದ ಮನವಿಗೆ ಸ್ಪಂದಿಸಿ ಸಿಎಂ ಬಿಎಸ್ ಯಡಿಯೂರಪ್ಪ ಪರಿಹಾರ ಮಂಜೂರು ಮಾಡಿದ್ದಾರೆ.  ಪರಿಹಾರ ಮಂಜೂರು ಮಾಡಿದ ಸಿಎಂ ಬಿಎಸ್ ವೈಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ.

ಕೆಯುಡಬ್ಲ್ಯೂಜೆ ನೆರವು…

ಪತ್ರಕರ್ತ ಸುರೇಶ್ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದರೂ  ಬದುಕುಳಿಯಲಿಲ್ಲ. ಇನ್ನು 13.5 ಲಕ್ಷ ಬಿಲ್ ಮಾಡಿದ ಆ ಖಾಸಗಿ ಆಸ್ಪತ್ರೆಗೆ ಅವರ ಪತ್ನಿ ಒಡವೆ ಮಾರಾಟ ಮಾಡಿ, 6.50 ಲಕ್ಷ ಬಿಲ್ ಹಣ ಕಟ್ಟಿ ಶವ ಪಡೆದಿದ್ದ ನೋವಿನ ಘಟನೆ ಕೆಯುಡಬ್ಲ್ಯೂಜೆ ಗಮನಕ್ಕೆ ಬಂದಿತ್ತು.journalist-Suresh- family -Rs 5 lakh- compensation-cm bs yeddyurappa

ಕೂಡಲೇ ಕಾರ್ಯೋನ್ಮುಖವಾದ ಕೆಯುಡಬ್ಲ್ಯೂಜೆ, ಆಸ್ಪತ್ರೆಗೆ ಕೊಡಬೇಕಾಗಿದ್ದ ಬಾಕಿ 7 ಲಕ್ಷ ಬಿಲ್ ಮನ್ನಾ ಮಾಡಿಸಿದ್ದಲ್ಲದೆ, ಹೆಚ್ಚುವರಿಯಾಗಿ ಪಡೆದಿದ್ದ 3.50 ಲಕ್ಷ ಹಣವನ್ನು ಸುರೇಶ್ ಕುಟುಂಬಕ್ಕೆ ವಾಪಸ್ ಕೊಡಿಸಿತ್ತು.

Key words: journalist-Suresh- family -Rs 5 lakh- compensation-cm bs yeddyurappa