ಕಾಂಗ್ರೆಸ್ ಸೇರ್ಪಡೆಗೆ ಆನೇಕರು ಒಲವು: ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್

Promotion

ಬೆಂಗಳೂರು,ಸೆಪ್ಟಂಬರ್,27,2023(www.justkannada.in): ಕಾಂಗ್ರೆಸ್ ಸೇರ್ಪಡೆಗೆ ಆನೇಕ ಮುಖಂಡರು ಒಲವು ತೋರಿಸಿದ್ದಾರೆ. ಹೀಗಾಗಿ  ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಜೆಡಿಎಸ್-ಬಿಜೆಪಿ ಮೈತ್ರಿ ಬೆನ್ನಲ್ಲೇ ಹಲವು ಮುಖಂಡರು ಕಾಂಗ್ರೆಸ್ ​ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಅನೇಕರು ಒಲವು ತೋರಿಸುತ್ತಿದ್ದಾರೆ. ಮೂವರು ಮಾಜಿ ಶಾಸಕರು ಪಕ್ಷ ಸೇರುತ್ತೇನೆ ಅಂತ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧಿಸಿ ಮುಖಂಡರು ಹೊರ ಬರುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಕಾಂಗ್ರೆಸ್​ ಗೆ ಸೇರುವ ಆಸೆ ವ್ಯಕ್ತಪಡಿಸಿದ್ದು,  ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಮಾಡಿದ್ದಾರೆ. ಸ್ಥಳೀಯ ಚುನಾವಣೆ, ಕಾರ್ಪೊರೇಷನ್ ಚುನಾವಣೆ ಹತ್ತಿರ ಬರುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Key words: joining- Congress-We -don’t -need – operation hasta-DCM -DK Shivakumar