ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಿ- ಸಚಿವ ನಾರಾಯಣಗೌಡ ಮನವಿ…

kannada t-shirts

ಮಂಡ್ಯ ಮಾ. 20,2021(www.justkannada.in):  ಜಿಲ್ಲೆಯ ಮಳವಳ್ಳಿಯ ಬಿ.ಜಿ.ಪುರ ಹೋಬಳಿಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು, ಗ್ರಾಮಸ್ಥರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.jk

ಬೆಳಿಗ್ಗೆ 7.30 ಕ್ಕೆ ಗ್ರಾಮದ ಮುಖಂಡರೊಂದಿಗೆ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಪ್ರತಿ ಮನೆಗೊಂದು ಬಟ್ಟೆ ಬ್ಯಾಗ್ ಹಾಗೂ ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸಲು ಎರಡು ಡಸ್ಟ್ ಬಿನ್ ಗಳನ್ನು ಸಚಿವ ನಾರಾಯಣಗೌಡ ವಿತರಿಸಿದರು.join-make-plastic-free-village-mandya-minister-narayana-gowda

ನಂತರ ಕೆರೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆರೆ ತುಂಬಿರುವ ಹಿನ್ನೆಲೆ ಕೆರೆಗೆ ಬಾಗಿನವನ್ನು ಅರ್ಪಿಸಲಾಯಿತು.

Key words: Join – make – plastic free- village-mandya-Minister -Narayana Gowda.

website developers in mysore