ಜ್ಞಾನವಾಪಿ ಮಸೀದಿ ವಿವಾದ: ಅರ್ಜಿ ಸಿಂಧುತ್ವದ ಬಗ್ಗೆ ನಾಳೆ ಕೋರ್ಟ್ ನಿಂದ ಆದೇಶ.

Promotion

ಉತ್ತರಪ್ರದೇಶ,ಮೇ,23,2022(www.justkannada.in): ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಕ್ತಾಯವಾಗಿದ್ದು ಅರ್ಜಿ ಸಿಂಧುತ್ವದ ಬಗ್ಗೆ ವಾರಣಾಸಿ ನ್ಯಾಯಾಲಯ ನಾಳೆ ಆದೇಶ ನೀಡಲಿದೆ.

ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ  ವಾದ-ಪ್ರತಿವಾದಗಳ ವಿಚಾರಣೆಯನ್ನು ಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.  ನಂತರ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ ಹಿಂದೂ ಮತ್ತು ಮುಸ್ಲಿಂ ಪರ ವಾದ ಪ್ರತಿವಾದ ನಡೆದು ಇಂದು ವಿಚಾರಣೆ ಮುಕ್ತಾಯವಾಗಿದೆ.

ವಿಚಾರಣೆಯ ವೇಳೆ 19 ವಕೀಲರು ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ಕೇವಲ 23 ಜನರಿಗೆ ಮಾತ್ರ ನ್ಯಾಯಾಲಯದ ಒಳಗೆ ಅನುಮತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Key words: jnanavapi Mosque-Controversy-Order – court- tomorrow