ಪದವಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ತರಬೇತಿ.

kannada t-shirts

ಮೈಸೂರು,ಫೆಬ್ರವರಿ,18,2022(www.justkannada.in): ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾರ್ಚ್‌ ನಲ್ಲಿ ನೇಮಕಾತಿ ಪರೀಕ್ಷೆ ಹಮ್ಮಿಕೊಂಡಿದೆ. ಇದರ ಭಾಗವಾಗಿಯೇ ಮೈಸೂರಿನ ಜ್ಞಾನ ಬುತ್ತಿ ಸಂಸ್ಥೆಯು ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂಬಂಸಿದಂತೆ ಹತ್ತು ದಿನಗಳ ತರಬೇತಿಯನ್ನು ಆಯೋಜಿಸಿದೆ.

ಫೆಬ್ರವರಿ 21ರಿಂದ ಸತತ ಹತ್ತು ದಿನಗಳ ಕಾಲ ಹಲವಾರು ವಿಷಯ ತಜ್ಞರು ಪರೀಕ್ಷಾ ತಯಾರಿಗೆ ತರಬೇತಿ ನೀಡಲಿದ್ದಾರೆ. ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಫೆ.21ರ ಸೋಮವಾರ ಸಂಜೆ 6ಕ್ಕೆ ತರಬೇತಿ ಕಾರ್ಯಕ್ರಮಕ್ಕೆ ಲಕ್ಷ್ಮಿಪುರಂ ಸರ್ಕಾರಿ ಶಾಲೆ ಆವರಣದಲ್ಲಿರುವ ಜ್ಞಾನಬುತ್ತಿಯಲ್ಲಿ ಚಾಲನೆ ನೀಡುವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ನಿರ್ದೇಶಕ ಪ್ರೊ.ಡಿ.ಕೆ.ರಾಜೇಂದ್ರ ಅವರು ಮಾರ್ಚ್ 2ರ ಬುಧವಾರ ಸಂಜೆ ಸಮಾರೋಪ ಭಾಷಣ ಮಾಡುವರು. ವಿಷಯ ತಜ್ಞರಾಗಿ ಪ್ರೊ.ಸಿ.ನಾಗಣ್ಣ, ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ನೀಲಗಿರಿ ತಳವಾರ್, ಪ್ರೊ.ಎಂ.ಜಿ.ಮಂಜುನಾಥ್, ಪ್ರೊ.ವಿಜಯಲಕ್ಷ್ಮಿ ಕರಿಕಲ್ ಸಹಿತ ಹಲವರು ಭಾಗಿಯಾಗುವರು.

ಹೆಚ್ಚಿನ ವಿವರಗಳಿಗೆ ಜ್ಞಾನಬುತ್ತಿ ‌ಕಾರ್ಯದರ್ಶಿ ಹೆಚ್. ಬಾಲಕೃಷ್ಣ (9448117455) ಅವರನ್ನು ಸಂಪರ್ಕಿಸುವಂತೆ ಪ್ರಧಾನ ‌ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Jnanabutthi- Coaching –professors – recruitment

website developers in mysore