ಜೆಡಿಎಸ್ ಅಧಿಕಾರಕ್ಕೆ ಬಂದರೇ ಮಹಿಳೆಗೆ ಡಿಸಿಎಂ ಸ್ಥಾನ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಕೋಲಾರ,ನವೆಂಬರ್,22,2022(www.justkannada.in): ಜೆಡಿಎಸ್ ಅಧಿಕಾರಕ್ಕೆ ಬಂದರೇ ಮಹಿಳೆಗೆ ಡಿಸಿಎಂ ಸ್ಥಾನ ನೀಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಕೋಲಾರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಅಧೀಕಾರಕ್ಕೆ ಬಂದರೆ ಮಹಿಳೆಗೆ ಡಿಸಿಎಂ ಸ್ಥಾನ ನೀಡಲಾಗುತ್ತದೆ. ಮುಸ್ಲೀಂ ಸಮುದಾಯದವರು ಸಿಎಂ ಕೂಡ ಆಗಬಹುದು. ಮುಸ್ಲೀಮರು ಯಾಕೆ ರಾಜ್ಯದ ಸಿಎಂ ಆಗಬಾರದು ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾಜಿಸ್ಪೀಕರ್ ರಮೇಶ್ ಕುಮಾರ್ ಗೆ ಟಾಂಗ್ ನೀಡಿದ ಹೆಚ್.ಡಿಕೆ, ಒಬ್ಬರು ಮೂರು ತಲೆಮಾರಿಗಾಗುವಷ್ಟು ಹಣ ಮಾಡಿದ್ದೇವೆ ಅಂದರು. ಕೆಸಿ ವ್ಯಾಲಿ, ಎತ್ತಿನಹೊಳೆ ಯೋಜನೆಯಿಂದ ಅವರು ಹಣ ಮಾಡಿದ್ದಾರೆ. ಚುನಾವಣೆ ಮುಗಿಯುವುದೊಳಗೆ ಎತ್ತಿನಹೊಳೆ ಯೋಜನೆ ಮುಗಿಸಲಿ ಎಂದು ಸವಾಲು ಹಾಕಿದರು.

Key words: jds-power-DCM-Women-Former CM-HD Kumaraswamy