ಕಾಂಗ್ರೆಸ್ ಗೆ ಮತ ಹಾಕಿರುವುದಾಗಿ ಒಪ್ಪಿಕೊಂಡ ಜೆಡಿಎಸ್ ಶಾಸಕ.

Promotion

ಬೆಂಗಳೂರು,ಜೂನ್,10,2022(www.justkannada.in):  ರಾಜ್ಯಸಭಾ ಚುನಾವಣಾ ಮತದಾನ ನಡೆಯುತ್ತಿದ್ದು, ಈ ಮಧ್ಯೆ ಅಡ್ಡಮತದಾನ ಮಾಡಿರುವುದಾಗಿ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಒಪ್ಪಿಕೊಂಡಿದ್ದಾರೆ.

ಹೌದು, ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿರುವುದಾಗಿ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ. ನನ್ನ ಮುಂದಿನ ರಾಜಕಾರಣ ಕಾಂಗ್ರೆಸ್ ನಲ್ಲೇ. ಹಿಂದೆ ಕಾಂಗ್ರೆಸ್ ನಿಂದಲೇ ಸಚಿವನಾಗಿದ್ದೆ. ಕುಮಾರಸ್ವಾಮಿ ಸಿಟ್ಟು ಮಾಡಿಕೊಳ್ಳಲಿ ಪರವಾಗಿಲ್ಲ. ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಗೆ ಮತ ನೀಡಿದ ಬಳಿಕ ಶ್ರೀನಿವಾಸ್ ಗೌಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Key words: JDS MLA- voting – Congress-Rajyasabha-election