ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು: ಹೊಳೆನರಸೀಪುರದಿಂದಲೇ ಬದಲಾವಣೆ ಆರಂಭ ಎಂದ ಸಂಸದ ಡಿ.ಕೆ ಸುರೇಶ್.

Promotion

ಹಾಸನ,ಫೆಬ್ರವರಿ,8,2023(www.justkannada.in):  ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕ್ಷೇತ್ರ ಹೊಳೆನರಸೀಪುರದಲ್ಲಿ  ಇಂದು ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಸಂಸದ ಡಿ.ಕೆ ಸುರೇಶ್ ನೇತೃತ್ವದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು. ಬಳಿಕ ಮಾತನಾಡಿದ ಡಿ.ಕೆ ಸುರೇಶ್, ಹೊಳೇನರಸೀಪುರದಲ್ಲಿನ ಬದಲಾವಣೆ ಇತಿಹಾಸದ ಪುಟ ಸೇರಬೇಕು. ಬಿಗಿ ಹಿಡಿತ ಹಾಗೂ ಬಿಗಿಯಾದ ವಾತಾವರಣ  ಈ ಕ್ಷೇತ್ರದಲ್ಲಿದೆ. ನಾವು ನಿಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ.

ಕೆಲವರು ಪೊಲೀಸರನ್ನ ಇಟ್ಟುಕೊಂಡು ಹೆದರಿಸುತ್ತಿದ್ದಾರೆ . ಕಾನೂನು ರಕ್ಷಣೆ ಮಾಡುವವರು ಒಬ್ಬರ ಪರ ಕೆಲಸ ಮಾಡಬಾರದು ಈ ರೀತಿ ನಡೆದುಕೊಂಡುರೇ ಮುಂದಿನ ದಿನ ಬೆಲೆ ತೆರಬೇಕಾಗುತ್ತದೆ. ಹೊಳೆ ಕ್ಷೇತ್ರದಿಂದಲೇ ಬದಲಾವಣೆ ಗಾಳಿ ಆರಂಭವಾಗಿದೆ. ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: jds-leaders-joined-Congress-Holenarasipur-MP-DK Suresh