ಇಂದು ಜೆಡಿಎಸ್ ನ ಜಲಧಾರೆ ಕಾರ್ಯಕ್ರಮ ಹಿನ್ನೆಲೆ: ಮೈಸೂರು ಭಾಗದ ಬಸ್ ಪ್ರಯಾಣಿಕರಿಗೆ ತಟ್ಟಿದ ಬಿಸಿ.

ಮೈಸೂರು,ಮೇ,13,2022(www.justkannada.in): ಬೆಂಗಳೂರಿನಲ್ಲಿ  ಇಂದು ಜೆಡಿಎಸ್ ನ ಜಲಧಾರೆ ಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮೈಸೂರು ಭಾಗದ ಬಸ್ ಪ್ರಯಾಣಿಕರಿಗೆ ಬಿಸಿ ತಟ್ಟಿದೆ.

ಜನತಾ ಜಲಧಾರೆ ಯಾತ್ರೆಗೆ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲು ಮೈಸೂರು ಜಿಲ್ಲೆಯಿಂದ  390ಕ್ಕೂ ಹೆಚ್ಚು ಬಸ್ ಬುಕಿಂಗ್ ಮಾಡಲಾಗಿದ್ದು, ಕೆ.ಆರ್ ನಗರ, ಪಿರಿಯಾಪಟ್ಟಣ, ಹೆಚ್ ಡಿ ಕೋಟೆ, ಮೈಸೂರು ನಗರದಿಂದ ಕಾರ್ಯಕರ್ತರು ಸಮಾರಂಭಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ ನಡೆಸುತ್ತಿರುವ ಪರಿಸ್ಥಿತಿ ಕಂಡು ಬಂದಿದೆ.

ಕೆ.ಆರ್ ನಗರ , ಹೆಚ್.ಡಿ ಕೋಟೆ, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಬಸ್ ಸಂಚಾರದ ಕೊರತೆ ಉಂಟಾಗಿದ್ದು, ಬಸ್ ಗಳ ಕೊರತೆಯಿಂದಾಗಿ ಶಾಲಾ , ಕಾಲೇಜು ತೆರಳುವ ನಗರ ಹಾಗೂ  ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆಯಾಗಿದೆ.  ಮಳೆಯ ನಡುವೆ  ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

Key words:JDS-jaladare – program-today-Mysore -bus –passengers- Trouble