ಎಲ್ಲಾ ಕಡೆ ಜೆಡಿಎಸ್ ಸ್ಪರ್ಧೆ: 15 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗ್ತೇನೆ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೆ…

Promotion

ಬೆಂಗಳೂರು,ನ,15,2019(www.justkannada.in):  ಉಪಚುನಾವಣೆಯಲ್ಲಿ ಸೋಲುತ್ತೇವೋ ಗೆಲ್ಲುತ್ತೇವೋ ಗೊತ್ತಿಲ್ಲ: ಎಲ್ಲಾ ಕಡೆ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ತಿಳಿಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು,  ನಾವು 15 ಕ್ಷೇತ್ರದಲ್ಲೂ ಸ್ಪರ್ಧಿಸುತ್ತೇವೆ. ಸೋಲು ಗೆಲುವು ಜನರ ಕೈಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ಹಾಗೆಯೇ ಅನರ್ಹ ಶಾಸಕರನ್ನ ಮಂತ್ರಿ ಮಾಡುವ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಅನರ್ಹ ಶಾಸಕರನ್ನ ಮಂತ್ರಿ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಹಾಗಾದರೇ ಸುಪ್ರೀಂಕೋರ್ಟ್ ತೀರ್ಪಿನ ಪಾವಿತ್ರತೆ ಏನು ಉಳಿಯಿತು. ಜನರ ಮತ ಪಡೆಯಲು ಹೀಗೆ ಹೇಳ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: JDS -competition –  Former Prime Minister- HD Deve Gowda.