”ಜನವರಿ 6ರಂದು ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ” : ಲೋಕೇಶ್ ತಾಳಿಕೋಟೆ…!

January 6th-Private-Different-demand-schools-Protest- Fulfillment-Lokesh Talikote ...!
Promotion

ಬೆಂಗಳೂರು,ಜನವರಿ,03,2021(www.justkannada.in)  : ರಾಜ್ಯಾದ್ಯಂತ ಶಾಲೆಗಳು ಆರಂಭವಾದ ಬೆನ್ನಲ್ಲೇ ಖಾಸಗಿ ಶಾಲೆಗಳು ಮತ್ತೊಂದು ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6ರಂದು ಪ್ರತಿಭಟನೆ ನಡೆಸುವುದಾಗಿ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.

jk-logo-justkannada-mysore

15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 20ರಂದು ಆನ್ಲೈನ್ ಶಾಲೆಗಳನ್ನು ಸ್ಥಗಿತಗೊಳಿಸಿ ಸುಮಾರು 12,500 ಶಾಲೆಗಳವರು ಪ್ರತಿಭಟನೆ ನಡೆಸಿದಾಗ ಸರ್ಕಾರ ಮಾತುಕತೆ ನಡೆಸಿ ಕಾರ್ಯಸಾಧು ಬೇಡಿಕೆಗಳನ್ನು ಮೂರು ದಿವಸಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿತ್ತು.

ಆದರೆ, ಈವರೆಗೆ ಯಾವುದೇ ಭರವಸೆಯನ್ನು ಈಡೇರಿಸದ ಕಾರಣ ಅನಿವಾರ್ಯವಾಗಿ ನಾವು ಮತ್ತೆ ಪ್ರತಿಭಟನೆ ಮಾಡಬೇಕಾಗಿದೆ ಎಂದು ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.

 

ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಪ್ರತಿಭಟನೆ ನಡೆಸಲು ಮುಂದಾದಾಗ ರಾಜ್ಯದ ಸಚಿವರು, ಶಿಕ್ಷಣ ಕ್ಷೇತ್ರದ ಜನಪ್ರತಿನಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ನಮ್ಮ ಸಂಘದ ಪದಾಕಾರಿಗಳನ್ನು ಶಿಕ್ಷಣ ಸಚಿವರ ಬಳಿ ಕೊಂಡೊಯ್ದು ಮಾತುಕತೆ ಕೂಡ ನಡೆಸಿದ್ದರು.

 

ಹಾಗಾಗಿ, ನಾವು ನಮ್ಮ ಪ್ರತಿಭಟನೆ ವಾಪಸ್ ಪಡೆದಿದ್ದೆವು. ಈಗ ಸರ್ಕಾರ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು. ಮಹಾಮಾರಿ ಕೋವಿಡ್-19ನಿಂದಾಗಿ ಎಲ್ಲೆಡೆ ಸಮಸ್ಯೆ ತಲೆದೋರಿದಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಸಮಸ್ಯೆಗಳು ಉದ್ಭವಿಸಿವೆ ಎಂದಿದ್ದಾರೆ.

January 6th-Private-Different-demand-schools-Protest- Fulfillment-Lokesh Talikote ...!

ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ನಮ್ಮ ಸಂಸ್ಥೆಗಳೂ ಕೂಡ ಸಮಸ್ಯೆಯಿಂದ ಹೊರತಾಗಿಲ್ಲ. ಸಾಲ ಪಡೆದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ. ಸಾಲದ ಇಎಂಐ ಅನ್ನು ಕನಿಷ್ಠ ಒಂದು ವರ್ಷದವರೆಗೆ ಮುಂದೂಡಲು ಬ್ಯಾಂಕ್ಗಳಿಗೆ ಸರ್ಕಾರ ಸೂಚಿಸಬೇಕು.

1995 ರಿಂದ 2000 ಅವಧಿಯಲ್ಲಿ ಪ್ರಾರಂಭವಾದ ಅನುದಾನ ರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು. ಮೂಲಭೂತ ಸೌಕರ್ಯ ಕೊರತೆ ನೆಪದಲ್ಲಿ ಮುಚ್ಚಲು ಹೊರಟಿರುವ ಬೀದರ್ ಜಿಲ್ಲೆಯ 124 ಶಾಲೆಗಳನ್ನು ಮುಚ್ಚಬಾರದು.

ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣವನ್ನು ಐಸಿಎಸ್ಸಿ ಮತ್ತು ಸಿಬಿಎಸ್ಸಿ ಶಾಲೆಗಳ ರೀತಿಯಲ್ಲಿ ತಾಲ್ಲೂಕು ಹಂತದಲ್ಲಿ ಅದಾಲತ್ ನಡೆಸಿ ನವೀಕರಿಸಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

key words : January 6th-Private-Different-demand-schools-Protest- Fulfillment-Lokesh Talikote …!