ನಾಳೆ ಜಂಬೂಸವಾರಿ : ಅಂಬಾ ವಿಲಾಸ ಅರಮನೆಗೆ ಬಿಗಿ ಪೊಲೀಸ್ ಭದ್ರತೆ

ಮೈಸೂರು,ಅಕ್ಟೋಬರ್,25,2020(www.justkannada.in) : ನಾಳೆ ಜಂಬೂ ಸವಾರಿ ಮೆರವಣಿಗೆ ಹಿನ್ನಲೆ ಅಂಬಾ ವಿಲಾಸ ಅರಮನೆಗೆ ಬಿಗಿ ಪೊಲೀಸ್ ಭದ್ರತೆ. ಅರಮನೆಯಂಗಳದಲ್ಲಿ ಸಿಬ್ಬಂದಿಗಳ ನಿಯೋಜನೆ ಪ್ರಕ್ರಿಯೆ ಆರಂಭ‌.jk-logo-justkannada-logoಕೊರೊನಾದಿಂದ ಅರಮನೆಯಂಗಳಕ್ಕೆ ಮಾತ್ರ ಸೀಮಿತವಾಗಿರುವ ಜಂಬೂ ಸವಾರಿ. ಅರಮನೆಯ ಆರು ದ್ವಾರಗಳಿಗೆ ಹೆಚ್ಚು ಸಿಬ್ಬಂದಿ ನಿಯೋಜನೆ.

ಮೈಸೂರಿನ ಕೆ.ಆರ್,ಎನ್.ಆರ್, ಉದಯಗಿರಿ, ದೇವರಾಜ, ವಿದ್ಯಾರಣ್ಯಪುರಂ ಸೇರಿದಂತೆ ವಿವಿಧ ಠಾಣೆಗಳ ಸಿಬ್ಬಂದಿಗಳ ನಿಯೋಜನೆ. ಸಿಬ್ಬಂದಿಗಳಿಗೆ ಭದ್ರತಾ ಕರ್ತವ್ಯ ನಿರ್ವಹಿಸುವ ಸ್ಥಳಗಳನ್ನ ಸೂಚಿಸುತ್ತಿರುವ ಹಿರಿಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಗಳನ್ನೊಳಗೊಂಡಂತೆ ಜಂಬೂ ಸವಾರಿಗಾಗಿ 300ಕ್ಕೂ ಹೆಚ್ಚು ಪೊಲೀಸರ ಭದ್ರತೆ ಮಾಡಲಾಗಿದೆ.

ವೀಕ್ಷಣೆಗೆ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ

Jambuswari-tomorrow-Tight-police-security-Amba Vilas Palace

ಜಂಬೂ ಸವಾರಿ ವೀಕ್ಷಣೆಗೆ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ. ಮೆರವಣಿಗೆ ವೀಕ್ಷಣೆಗೆ ಕುರ್ಚಿ, ಶಾಮಿಯಾನದ ವ್ಯವಸ್ಥೆ. ಜಂಬುಸವಾರಿ ತೆರಳುವ ಎಡ ಮತ್ತು ಬಲ ಭಾಗಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆ. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆ, ಕಲಾತಂಡಗಳು, ಅಶ್ವರೋಹಿ ಪಡೆಗೆ ಸ್ಥಳ ನಿಯೋಜನೆ. ಅರಮನೆ ಆವರಣದಲ್ಲಿ ಜಂಬೂಸವಾರಿ ತೆರಳುವ ಮಾರ್ಗದ ಬದಿಗಳಲ್ಲಿ ಬ್ಯಾರಿಕೇಡ್ ಜೋಡಿಸಲಾಗಿದೆ.

ಇದೇ ಮೊದಲ ಬಾರಿಗೆ 750 ಕೆಜಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು.  ಆಯುಧಪೂಜೆ ಹಿನ್ನೆಲೆ ಇಂದು ಗಜಪಡೆಗೆ ತಾಲೀಮು ಇಲ್ಲ.

key words : Jambuswari-tomorrow-Tight-police-security-Amba Vilas Palace