ಕೆಲವೇ ಕ್ಷಣಗಳಲ್ಲಿ ಜಂಬೂಸವಾರಿ ಮೆರವಣಿಗೆ: ಚಾಮುಂಡೇಶ್ವರಿ ಉತ್ಸವಮೂರ್ತಿಗೆ  ಅಂತಿಮ ಹಂತದ ಅಲಂಕಾರ ಕಾರ್ಯ

Promotion

ಮೈಸೂರು,ಅಕ್ಟೋಬರ್,26,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಅಂಬಾರಿ ಮೇಲೆ ವಿರಾಜಮಾನಳಾಗಿ ದರ್ಶನ ಕೊಡಲು ತಾಯಿ ಚಾಮುಂಡೇಶ್ವರಿ ರೆಡಿಯಾಗಿದ್ದಾಳೆ.

ಜಂಬೂ ಸವಾರಿ ಮೆರವಣಿಗೆ ಹಿನ್ನೆಲೆ  ಚಿನ್ನದ ಅಂಬಾರಿಗೆ ಅಂತಿಮ ಹಂತದ ಅಲಂಕಾರ ಕಾರ್ಯನಡೆಯುತ್ತಿದ್ದು, ಚಿನ್ನದ ಅಂಬಾರಿಯನ್ನು ಹೂವುಗಳಿಂದ ವಿಶೇಷವಾಗಿ ಸಿಂಗಾರಗೊಳಿಸಲಾಗುತ್ತಿದೆ. ಇನ್ನು ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಗೂ ಅಂತಿಮ ಹಂತದ ಅಲಂಕಾರ ಕಾರ್ಯ ನೆರವೇರಿಸಲಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆ ತಾಯಿ ಚಾಮುಂಡೇಶ್ವರಿ ಸಿದ್ದಳಾಗುತ್ತಿದ್ದಾಳೆ. ಇದ್ಧ ಕ್ಯಾಪ್ಟನ್ ಅಭಿಮನ್ಯು ಸಹ ಚಿನ್ನದ ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಕ್ಯಾಪ್ಟನ್ ಅಭಿಮನ್ಯುಗೆ ಹಣೆಪಟ್ಟಿ ದಂತಗಳಿಗೆ ಕವಚ, ವಿಶೇಷ ಕಾಸಿನ ಸರದ ಕೊರಳ ಘಂಟೆ ಹಾಕಿ ಅಲಂಕಾರ ಮಾಡಲಾಗಿದೆ.jambuswari-few-moments-decoration-chamundeshwari

Key words: Jambuswari – few moments-decoration – Chamundeshwari