ಜಲೀಲನ ನೆನಪಾಗಿ ‘ಪೇಟೆ ರೌಡಿ’ ಎಂದಿರಬಹುದೇ- ಮಂಡ್ಯ ಸಂಸದೆ ಕಾಲೆಳೆದ ಮೈಸೂರು ಸಂಸದ

ಮೈಸೂರು, ನವೆಂಬರ್,17,2020(www.justkannada.in):  ತಮ್ಮನ್ನು ಪೇಟೆ ರೌಡಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ  ಅಂಬರೀಶ್ ಅವರಿಗೆ  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.kannada-journalist-media-fourth-estate-under-loss

ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾ ಜಲೀಲ‌ ನೆನಪಾಗಿ ಡೈಲಾಗ್ ಹೊಡೆದಿರ್ತಾರೆ. ನೀವುಗಳು ಅದನ್ನ ಸೀರಿಯಸ್ ಆಗಿ ತಗೋಬೇಡಿ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಅಂಬರೀಶ್ ಅವರ ಕಾಲೆಳೆದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಸುಮಲತಾ ಅವರ ಹೇಳಿಕೆಯನ್ನ ಸೀರಿಯಸ್ ಆಗಿ ತಗೋಬೇಡಿ. ಸುಮಲತಾ ಅವರ ಹೇಳಿಕೆ ಬಗ್ಗೆ  ನನಗ್ಯಾಕೋ ನಂಬಿಕೆ ಬರುತ್ತಿಲ್ಲ.  ಸುಮಲತಾ ಅವರು ಸಿನಿಮಾ ಜಗತ್ತಿನಿಂದ ಬಂದವರು. ಬಣ್ಣದ ಲೋಕದಿಂದ ಬಂದವರು. ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾ ಜಲೀಲ‌ ನೆನಪಾಗಿ ಡೈಲಾಗ್ ಹೊಡೆದಿರ್ತಾರೆ. ನೀವುಗಳು ಅದನ್ನ ಸೀರಿಯಸ್ ಆಗಿ ತಗೋಬೇಡಿ ಎಂದು ಟಾಂಗ್ ನೀಡಿದರು.

ಹಾಗೆಯೇ ನಾನು ಯಾವ ಸ್ಟಾರ್ ಅಲ್ಲ. ನನಗೆ ಯಾವ ಅಭಿಮಾನಿಯೂ ಬಂದು ಓಟು ಹಾಕೋಲ್ಲ‌. ನನಗೆ ನನ್ನ ಕೆಲಸವೇ ಕಾಯೋದು. ಹಾಗಾಗಿ ನನಗೆ ಕೆಲಸದ ಮೇಲೆ ನಂಬಿಕೆ ಇದೆ. ನಾನು ಬಸವಣ್ಣನವರ ಕಾಯಕನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ವ್ಯತಾ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡೋಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ.

ಚಪ್ಪಲಿ ಹೊಲಿಯುವನ ಮಗ ಅಮೇರಿಕಾದ ಅಧ್ಯಕ್ಷ ಆಗಿದ್ದಾರೆ. ಟೀ ಮಾರುತ್ತಿದ್ದ ಮೋದಿ ಪ್ರಧಾನಿ ಆಗಿದ್ದಾರೆ. ರಾಜಕೀಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ. 10 ಪಥದ ಹೆದ್ದಾರಿ‌ ಕಾಮಗಾರಿ ವಿಚಾರದಲ್ಲಿ ಮಂಡ್ಯ ಜನರ ಅಡ್ಡ ಹಾಕಿ ನನ್ನನ್ನ ಕೇಳಿದ್ರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈಓವರ್ ಮಾಡಿಸಿಕೊಡುವ ಭರವಸೆ ಕೊಟ್ಟೆ. ಇದು ಮಂಡ್ಯ ರಾಮನಗರ ಮೈಸೂರು ಜಿಲ್ಲೆಯ ಜನರು ಅನುಕೂಲ ಆಗಲಿದೆ. ಅದಕ್ಕಾಗಿ ನಾನು ಭರವಸೆ ಕೊಟ್ಟೆ ವಿನಹ ಬೇರೆ ಏನು ಮಾತನಾಡಿಲ್ಲ. ಯಾವ ರಸ್ತೆ ಯಾರ ವ್ಯಾಪ್ತಿಗೆ ಬರುತ್ತೆ ಅಂತ ಕನಿಷ್ಠ ಜ್ಞಾನ ಇದ್ದರೆ ಅಪದ್ದವಾದ ಹೇಳಿಕೆ ನಿಲ್ಲುತ್ತವೇ. 10 ಪಥದ ಹೆದ್ದಾರಿ ಅನುಕೂಲಕ ಮಾಡೋದು ಉದ್ದೇಶ. ಅದನ್ನ ಬಿಟ್ಟು ಬೇರೆನು ನನಗೆ ಗೊತ್ತಿಲ್ಲ ಎಂದು ನುಡಿದರು.

Key words: Jaleela’s- memory – dirty rowdy- Mysore MP- prathap simha- Mandya MP- Sumalatha ambarish