‘ಕೊರೊನಾ’ ಬಿಟ್ಟ ಚೀನಾ ವಿರುದ್ಧ ಟ್ವಿಟ್ಟರ್’ನಲ್ಲಿ ಜಗ್ಗೇಶ್ ಆಕ್ರೋಶ !

Promotion

ಬೆಂಗಳೂರು, ಸೆಪ್ಟೆಂಬರ್ 27, 2020 (www.justkannada.in): ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಚೀನಾದ ವಿರುದ್ಧ ಕಿಡಿಕಾರಿದ್ದಾರೆ.

ಕೊರೋನ ಹರಡಿ ಮಳ್ಳಿಯಂತ ದರಿದ್ರದೇಶ ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್. ಪಿ .ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿರುವ ಜಗ್ಗೇಶ್, ಈ ರೀತಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ…
ಯಾರ ಕಣ್ಣು ತಾಕಿತು!
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!