ನವರಸ ನಾಯಕನಿಗಾಗಿ ‘ರಾಘವೇಂದ್ರ ಸ್ಟೋರ್ಸ್​’ ತೆರೆದ ಹೊಂಬಾಳೆ ಫಿಲಂಸ್: ಪೋಸ್ಟರ್ ಆಯ್ತು ವೈರಲ್​

Promotion

ಬೆಂಗಳೂರು, ಸೆಪ್ಟೆಂಬರ್ 23, 2021 (www.justkannada.in): ಹೊಂಬಾಳೆ ಫಿಲಂಸ್​ ಬ್ಯಾನರ್​ ಅಡಿ ನಿರ್ಮಿಸುತ್ತಿರುವ 12ನೇ ಸಿನಿಮಾವನ್ನು ಲಾಂಚ್ ಮಾಡಿದೆ.

ಸಂತೋಷ್​ ಆನಂದ್​ ರಾಮ್ ಮತ್ತೆ ಹೊಂಬಾಳೆ ಸಿನಿಮಾದ ಜತೆ ಕೈ ಜೋಡಿಸಿದ್ದಾರೆ. ನವರಸ ನಾಯಕ ಜಗ್ಗೇಶ್​ ವಿಭಿನ್ನ ಪಾತ್ರದಲ್ಲಿ ರಂಜಿಸಲಿದ್ದಾರೆ.

ಸಂತೋಷ್​ ಆನಂದ್ ರಾಮ್​ ಹಾಗೂ ಜಗ್ಗೇಶ್​ ಅವರ ಕಾಂಬಿನೇಶನ್​ ಸುದ್ದಿ ಸಿನಿಮಾದ ಪೋಸ್ಟರ್ ರಿಲೀಸ್​ ಆಗುತ್ತಿದ್ದಂತೆ ಸಿನಿ ತಾರೆಯರು ಹಾಗೂ ಜಗ್ಗೇಶ್ ಅಭಿಮಾನಿಗಳನ್ನು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿನಿಮಾ ಕುರಿತಾಗಿ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ. ರಾಘವೇಂದ್ರ ಸ್ಟೋರ್ಸ್’ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ರುಚಿ ಸವಿಯಲು ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಹಿರಿಯ ನಟ ಜಗ್ಗೇಶ್ ನಮ್ಮೊಂದಿಗೆ ಸೇರಿಕೊಂಡಿದ್ದು ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕನಿಗೆ ಹಾಸ್ಯದ ಕಚಗುಳಿ ಇಡುವುದು ಖಂಡಿತ ಎಂದು ಟ್ವೀಟ್​ ಮಾಡಿದ್ದಾರೆ.

key: jaggesh new movie raghavendra stores launched by hombale films