ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿಕೊಟ್ಟ ನಟ ಜಗ್ಗೇಶ್

Promotion

ಮಧುಗಿರಿ, ಮಾರ್ಚ್ 13, 2020 (www.justkannada.in): ಅಂಧ ಕಲಾವಿದೆಯರಾದ ರತ್ನಮ್ಮ- ಮಂಜಮ್ಮ ಸಹೋದರಿಯರಿಗಾಗಿ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಜಗ್ಗೇಶ್‌ ಅಭಿಮಾನಿಗಳ ಸಂಘ ಹಾಗೂ ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ನಿಂದ ನಿರ್ಮಿಸಿಕೊಡಲಾಗಿದೆ.

ಮನೆಯ ಗೃಹಪ್ರವೇಶ ಊರಿನ ಹಬ್ಬದಂತೆ ನಡೆಯಿತು. ಮನೆ ಪ್ರವೇಶಿಸಿದ ಜಗ್ಗೇಶ್‌, ಮನೆಯ ಒಳಾಂಗಣ ಕಂಡು ಸಂತಸಗೊಂಡರು. ಪತ್ನಿ ಪರಿಮಳ ಅವರಿಗೆ ತೋರಿಸಿ ‘ಮನೆ ಎಷ್ಟು ಸುಂದರವಾಗಿದೆ’ ಎಂದು ಸಂಭ್ರಮಿಸಿದರು.

ನೆಲೆಸಲು ಸೂರಿಲ್ಲದೆ ತಾಲ್ಲೂಕಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡುತ್ತಾ ಜೀವನ ಸಾಗಿಸುತ್ತಿದ್ದ ಅಂಧ ಕಲಾವಿದೆಯರಿಗೆ ‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ನೋವಿಗೆ ಮಿಡಿದ ನಟ ಜಗ್ಗೇಶ್‌ ಮನೆ ನಿರ್ಮಿಸಿಕೊಟ್ಟಿದ್ದಾರೆ.