ಬೆಂಗಳೂರಿನಲ್ಲಿ ಪುನಃ ‘ತುರಿಕೆ’ ಗ್ಯಾಂಗ್ ನ ಕೈಚಳಕ ಶುರು.

Promotion

ಬೆಂಗಳೂರು, ಜುಲೈ 27, 2021 (www.justkannada.in): ತುರಿಕೆ ಉಂಟು ಮಾಡುವಂತಹ ಪುಡಿಯನ್ನು ಎರಚಿ ಜನರನ್ನು ಲೂಟಿ ಮಾಡುತ್ತಿದ್ದ ಅಪರಾಧಿಗಳ ಗ್ಯಾಂಗ್ ಪುನಃ ಬೆಂಗಳೂರಿನಲ್ಲಿ ತಮ್ಮ ಕೈಚಳಕವನ್ನು ಆರಂಭಿಸಿದೆ.jk

ಬೆಂಗಳೂರು ದಕ್ಷಿಣ ಭಾಗದ ಹುಳಿಮಾವು ಬಳಿ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ರೂ.7 ಲಕ್ಷ ಕಳೆದುಕೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ನ್ಯಾನಪ್ಪನಹಳ್ಳಿಯ ಸುಗಮ ಬಡಾವಣೆ ನಿವಾಸಿ ರಾಘವೇಂದ್ರ ಎ.ವಿ. ಅವರು ತಮ್ಮ ಮೈ ಮೇಲೆ ತುರಿಕೆ ಉಂಟು ಮಾಡುವ ವಸ್ತುವನ್ನು ಎರಚಿ, ಸ್ಕೂಟರ್ ನ ಮುಂಭಾಗದ ಬೂಟ ಸ್ಪೇಸ್ನೂಲ್ಲಿ ಇಟ್ಟುಕೊಂಡಿದ್ದಂತಹ ಹಣದ ಕೈಚೀಲವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿದ್ದಾರೆ.

ರಾಘವೇಂದ್ರ ಅವರು ಜುಲೈ 22ರಂದು ತಮ್ಮ ಮನೆಗೆ ಬಹಳ ಹತ್ತಿರದಲ್ಲೇ ಇರುವಂತಹ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಹಣ ಪಡೆದುಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಸ್ಕೂಟರ್  ನಲ್ಲಿ ತೆರಳಿದ್ದ ಅವರು ಹಣದ ಕೈಚೀಲವನ್ನು ಸ್ಕೂಟರ್ನ ಮುಂಭಾಗದ ಬೂಟ್ ಸ್ಪೇಸ್ನತಲ್ಲಿ (ಸ್ಕೂಟರ್ ನ ಮುಂಭಾಗದಲ್ಲಿ, ಕಾಲಿನ ಬಳಿ ಇರುವ ಲಾಕ್ ಮಾಡುವಂತಹ ಬುಟ್ಟಿ) ಇಟ್ಟುಕೊಂಡು ಮನೆಗೆ ಹಿಂದಿರುದ್ದಾರೆ.

ಇದ್ದಕ್ಕಿದ್ದಂತೆ ಕತ್ತಿನ ಬಳಿ ತುರಿಕೆಯಾಗಿದೆ. ಬ್ಯಾಂಕಿನಿಂದ ತಮ್ಮ ಮನೆಗೆ ಕೇವಲ 2-3 ನಿಮಿಷ ದೂರವಷ್ಟೇ. ಆ ತುರಿಕೆ ಎಷ್ಟರ ಮಟ್ಟಿಗೆ ಇತ್ತೆಂದರೆ ಆತ ಮನೆಯ ಬಳಿ ಬರುತ್ತಿದ್ದಂತೆ ಸ್ಕೂಟರ್ ಮತ್ತು ಹಣದ ಕೈಚೀಲವನ್ನು ಅಲ್ಲೇ ಬಿಟ್ಟು ಕೆರೆದುಕೊಳ್ಳುತ್ತಾ ಮನೆಯೊಳಗೆ ಓಡಿದ್ದಾರೆ. ತಮಗೆ ಬಹಳ ತುರಿಕೆಯಾಗುತ್ತಿರುವುದಾಗಿ ಮನೆಯವರಿಗೆ ತಿಳಿಸಿ ಸ್ವಲ್ಪ ಎಣ್ಣೆ ಹಾಗೂ ಹರಿಶಿಣದ ಪುಡಿಯನ್ನು ಮಿಶ್ರಣ ಮಾಡಿ ಕತ್ತಿನ ಭಾಗದಲ್ಲಿ ತುರಿಕೆಯಾಗುತ್ತಿದ್ದಂತಹ ಜಾಗಕ್ಕೆ ಲೇಪಿಸಿಕೊಂಡು ಸ್ನಾನಕ್ಕೆ ತೆರಳಿದ್ದಾರೆ. ಇಷ್ಟೆಲ್ಲಾ ಆದ ನಂತರ ಅವರಿಗೆ ಹಣದ ಕೈಚೀಲದ ಬಗ್ಗೆ ನೆನಪಾಗಿದೆ.  ಕೂಡಲೇ ತಮ್ಮ ಮಡದಿಗೆ ಚೀಲ ತರಲು ತಿಳಿಸಿದ್ದಾರೆ. ಆದರೆ ಆಕೆ ಹೊರಗೆ ಹೋಗಿ ನೋಡಿದಾಗ, ಸ್ಕೂಟರ್ ನ ಬೂಟ್ ಸ್ಪೇಸ್ ಅನ್ನು ಯಾರೋ ಮುರಿದು ಹಣದ ಕೈಚೀಲವನ್ನು ಕದ್ದೊಯ್ದಿದರು.

ಕೆಲವು ನಿಮಿಷಗಳ ನಂತರ ರಾಘವೇಂದ್ರ ಅವರಿಗೆ ಓರ್ವ ಆಟೋ ಚಾಲಕನಿಂದ ದೂರವಾಣಿ ಕರೆ ಬಂದಿದೆ. ಆತನಿಗೆ ದೇವರಚಿಕ್ಕನಹಳ್ಳಿ ಬಳಿ ರಾಘವೇಂದ್ರ ಅವರ ಕೈಚೀಲ ದೊರೆತಿರುವುದಾಗಿ ತಿಳಿಸಿದ್ದಾರೆ. ಕೈಚೀಲದ ಒಳಗಿದ್ದ ರಾಘವೇಂದ್ರ ಅವರ ಬ್ಯಾಂಕ್ ಪಾಸ್ ಬುಕ್ ಮತ್ತು ಟೆಕ್ಕಿಯ ದೂರವಾಣಿ ಸಂಖ್ಯೆ ದೊರೆತಿರುವುದಾಗಿ ಆಟೋಚಾಲಕ ತಿಳಿಸಿದ್ದಾನೆ. ಆದರೆ ಅದರಲ್ಲಿ ನಗದು ಇರಲಿಲ್ಲವಂತೆ.

ಬೈಕಿನಲ್ಲಿ ಬಂದಿದ್ದಂತಹ 6 ಜನರ ಮೇಲೆ ಶಂಕೆ

ಹುಳಿಮಾವು ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಕೆ. ಅವರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕಿನ ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ಮೂರು ಮೋಟಾರ್ ಬೈಕುಗಳಲ್ಲಿ ಬಂದಿದ್ದಂತಹ ಆರು ಜನರ ಮೇಲೆ ಅನುಮಾನ ಮೂಡಿದೆ. ಅವರೆಲ್ಲರೂ ಮಾಸ್ಕ್  ಹಾಗೂ ಹೆಲ್ಮೇಟ್ ಗಳನ್ನ ಧರಿಸಿದ್ದರು ಎನ್ನಲಾಗಿದೆ.

ಸಿಸಿಟಿವಿ ಫುಟೇಜ್ ನಲ್ಲಿ ರಾಘವೇಂದ್ರ ಅವರ ಮೇಲೆ ಏನನ್ನೋ ಎರಚಿರುವುದು ಗೋಚರಿಸಿದೆ ಮತ್ತು ಅವರನ್ನು ಅವರ ಮನೆಯವರೆಗೆ ಹಿಂಬಾಲಿಸಿಕೊಂಡು ಹೋಗಿರುವುದು ತಿಳಿದು ಬಂದಿದೆ. ರಾಘವೇಂದ್ರ ಅವರು ಮನೆಯ ಒಳಕ್ಕೆ ಓಡಿದ ಕೂಡಲೇ ಇವರು ಸ್ಕೂಟರ್ ನ ಮುಂಭಾಗದಲ್ಲಿದ್ದಂತಹ ಬೀಗವನ್ನು ಮುರಿದು ಕೈಚೀಲದೊಂದಿಗೆ ದೇವರಚಿಕ್ಕನಹಳ್ಳಿ ಕಡೆ ಪರಾರಿಯಾಗಿರುವುದು ಫುಟೇಜ್ ನಲ್ಲಿ ತಿಳಿದು ಬಂದಿದೆ.

ಪೊಲೀಸ್ ಅಧಿಕಾರಿಯ ಪ್ರಕಾರ ಈ ಲೂಟಿ ಗ್ಯಾಂಗ್ ತಮ್ಮ ಬೈಕುಗಳಲ್ಲಿ ಬಹಳ ವೇಗವಾಗಿ ತೆರಳಿರುವ ಕಾರಣದಿಂದಾಗಿ ಫುಟೇಜ್ ನಲ್ಲಿ ದ್ವಿಚಕ್ರವಾಹನಗಳ ಸಂಖ್ಯೆ ಸ್ಪಷ್ಟವಾಗಿ ಕಂಡು ಬಂದಿಲ್ಲ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್..

Key words: ‘Itching’ gang -fights – Bangalore-lost- Rs 7 lakh