ಶೂಟಿಂಗ್ ಸೆಟ್’ನಲ್ಲೇ ‘ಇಳಯದಳಪತಿ’ ವಿಜಯ್‌ ಶಾಕ್ ಕೊಟ್ಟ ಐಟಿ ಅಧಿಕಾರಿಗಳು

Promotion

ಚೆನ್ನೈ, ಫೆಬ್ರವರಿ 6, 2019 (www.justkannada.in): ನಟ ಇಳಯದಳಪತಿ ವಿಜಯ್‌ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

‘ಮಾಸ್ಟರ್‌’ ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲೇ ವಿಜಯ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯ್‌ ಅಭಿನಯದ ಬಿಗಿಲ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾವನ್ನು ಎಜಿಎಸ್‌ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ತೆರಿಗೆ ವಂಚನೆ ಆರೋಪದಡಿಯಲ್ಲಿ ವಿಜಯ್‌ ಅವರನ್ನು ಐಟಿ ಆಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಐಟಿ ಅಧಿಕಾರಿಗಳು ಎಜಿಎಸ್‌ ಸಂಸ್ಥೆ ಹಾಗೂ ನಿರ್ಮಾಪ‍ಕ ಅನ್ಬು ಚೆಯಾನ್‌ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ ಕೆಲ ಗಂಟೆಗಳಲ್ಲಿ ವಿಜಯ್‌ ಅವರನ್ನು ವಿಚಾರಣೆ ನಡೆಸಿದ್ದಾರೆ.