ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಐಟಿ ಶಾಕ್: ಮನೆ ಮೇಲೆ ದಾಳಿ, ದಾಖಲೆ ಪರಿಶೀಲನೆ

Promotion

ಬೆಂಗಳೂರು, ಆಗಸ್ಟ್ 5,2021(www.justkannada.in):  ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ಶಾಕ್  ನೀಡಿದ್ದಾರೆ.

ಇಂದು ಬೆಳಗ್ಗೆ 6 ಗಂಟೆ ವೇಳೆಗೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ  ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿ, ಫ್ಲ್ಯಾಟ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು  ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.  ಇದರ ಜೊತೆಗೆ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.

ದೆಹಲಿಯಿಂದ ಬಂದಿರುವ 45 ಐಟಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ರಾಜಕೀಯದ ಹೊರತಾಗಿ ನ್ಯಾಷನಲ್ ಟ್ರಾವೆಲ್ಸ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು.

ENGLISH SUMMARY…..

ED shock for Cong. leader Zameer Ahmed: Raid on residence, verification of documents
Bengaluru, August 5, 2021 (www.justkannada.in): Officials of the Enforcement Directorate (ED) gave a shock to Congress leader Zameer Ahmed early in the morning today by raiding his various residences, offices, and other places.
The raid commenced at 6.00 am today at his residence located near the Cantonment Railway Station in Bengaluru by the officials of the Enforcement Director. Simultaneously, raids were conducted on his other residences, offices, including his National Travels office, flat located in Vasanathnagar, Bamboo Bazaar, Sadashivanagara property, and all the documents are being verified.
The raid is held by a team of officials who have come from Delhi. Zameer Ahmed Khan is the Congress MLA from Chamarajpet Constituency in Bengaluru. Apart from politics, he owns the National Travels and other businesses.
Keywords: ED/ raid/ Zameer Ahmed/ Congress leader

Key words: IT – Attack –Congress MLA -Jameer Ahmed Khan- House.