ಬೆಳಗಾವಿ, ಮಂಗಳೂರಿನಲ್ಲಿ ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ…

Promotion

ಬೆಳಗಾವಿ,ಫೆ,26,2020(www.justkannada.in):  ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಉದ್ಯಮಿಗಳ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿ ನಿಪ್ಪಾಣಿಯಲ್ಲಿರು ಉದ್ಯಮಿ ರಮೇಶ್ ಪೈ  ಎಂಬುವವರ ನಿವಾಸದ ಮೇಲೆ  ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  30ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಬೀಡಿ ಕಾರ್ಖಾನೆ ಮಾಲೀಕರಾಗಿರುವ ರಮೇಶ್ ಪೈ ಜಿಲ್ಲೆಯಲ್ಲಿ ದೊಡ್ಡ ಉದ್ಯಮಿ ಎಂದೇ ಗುರ್ತಿಸಿಕೊಂಡಿದ್ದವರು. ಏಕಾಏಕಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಲಿಸುತ್ತಿದ್ದಾರೆ.

ಇನ್ನು ಮಂಗಳೂರಿನಲ್ಲಿ ಬೀಡಿ ಕಂಪನಿ ಮಾಲೀಕರ ಕಚೇರಿ ಕಂಪನಿ ನಿವಾಸದ ಮೇಲೂ ಐಟಿ ದಾಳಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಂಪನಿಗಳಿಂದ ಆದಾಯ ತೆರಿಗೆ ವಂಚನೆ ನಡೆದಿದೆ ಎಂಬ ದೂರು ಐಟಿ ಇಲಾಖೆಯ ಅಧಿಕಾರಿಗಳಿಗೆ ಬಂದಿದ್ದ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.

Key words: IT attack – businessman- residence –Belgavi- Mangalore