ಐಟಿ  ದಾಳಿ ವಿಚಾರ: ನಟಿ ರಶ್ಮಿಕಾ ಮಂದಣ್ಣ ವಿಚಾರಣೆ ಅಂತ್ಯ….

Promotion

ಕೊಡಗು,ಜ,17,2020(www.justkannada.in):   ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಇಂದು ಮುಂದುವರೆದಿದೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರ ವಿಚಾರಣೆ ಅಂತ್ಯವಾಗಿದೆ.

ಕಳೆದ ರಾತ್ರಿ ನಟಿ ರಶ್ಮಿಕಾ ಮಂದಣ್ಣ ನಿನ್ನೆ ಚೆನ್ನೈಯಿಂದ ಕೊಡಗು ಜಿಲ್ಲೆಯ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಅವರನ್ನ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು ಇಂದು ವಿಚಾರಣೆ ಮುಗಿಸಿ  ನಟಿ ರಶ್ಮಿಕಾ ಮಂದಣ್ಣ ಮನೆಯಿಂದ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕುಕ್ಲೂರಿನಲ್ಲಿರುವ ಗ್ರಾಮದಲ್ಲಿ ನಟಿ ರಶ್ಮಿಕಾ ಮಂದಣ್ಣ ತಾಯಿ ಸುಮನ್  ತಂದೆ ಮದನ್ ಮಂದಣ್ಣ ಅವರ ವಿಚಾರಣೆ ಮುಂದುವರೆದಿದೆ.  6 ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.  ನಿನ್ನೆ ಬೆಳಿಗ್ಗೆಯೇ ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ  ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದರು.

Key words: IT attack- Actress -Rashmika Mandanna –hearing