ನ್ಯೂ ಇಯರ್ ಸೆಲೆಬ್ರೆಷನ್’ಗೆ ಪ್ಲಾನ್ ಇದ್ಯಾ?! ನಾಳೆ ಬಿಡುಗಡೆಯಾಗಲಿದೆ ಮಾರ್ಗಸೂಚಿ

Promotion

ಬೆಂಗಳೂರು, ಡಿಸೆಂಬರ್ 27, 2020 (www.justkannada.in): ನ್ಯೂ ಇಯರ್ ಸೆಲೆಬ್ರೆಷನ್’ಗೆ ಪ್ಲಾನ್ ಇದ್ಯಾ?! ಹಾಗಿದ್ದರೆ ನಾಳೆ ಬಿಡುಗಡೆಯಾಗಲಿದೆ ಮಾರ್ಗಸೂಚಿಯನ್ನು ಒಮ್ಮೆ ನೋಡಿ ನಂತರ ಮುಂದುವರಿಯಿರಿ…

ಹೌದು. ಹೊಸ ವರ್ಷಾಚರಣೆಗೆ ನಾಳೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ದೊಡ್ಡ ಸಂಖ್ಯೆಯಲ್ಲಿ ಜನ ಒಂದು ಕಡೆ ಸೇರುವಂತಿಲ್ಲ. ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಅಂತಿಮವಾಗಿ ನಾಳೆ ಮಾರ್ಗಸೂಚಿ ಬಿಡುಗಡೆಯಾಗಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.