ನೀರಾವರಿ ಇಲಾಖೆಯ 20 ಸಾವಿರ ಕೋಟಿ ರೂ. ಟೆಂಡರ್ ನಲ್ಲಿ ಭಾರಿ ಅಕ್ರಮ- ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಗಂಭೀರ ಆರೋಪ.

Promotion

ಬೆಂಗಳೂರು,ಜೂನ್,18,2021(www.justkannada.in):  ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನ ಭೇಟಿಯಾಗಿ ಚರ್ಚಿಸಿ ಸಿಎಂ ಬದಲಾವಣೆಗೆ ಆಗ್ರಹಿಸಿರುವ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಇದೀಗ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.jk

ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ ಟೆಂಡರ್ ತರಾತುರಿಯಲ್ಲಿ ಕರೆದು ಅಂಗೀಕರಿಸಿದ್ದಾರೆ. 20 ಸಾವಿರ ಕೋಟಿ ಟೆಂಡರ್ ನಲ್ಲಿ ಭಾರಿ ಅಕ್ರಮ  ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಹೆಚ್.ವಿಶ್ವನಾಥ್, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮವಾಗಿದೆ  ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ.  20 ಸಾವಿರ ಕೋಟಿ ಟೆಂಬರ್ ನಲ್ಲಿ ಭಾರಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಕುಟುಂಬ ರಾಜಕಾರಣ ಮಿತಿ ಮೀರಿ ಹೋಗಿದೆ.  ಕುಟುಂಬ ರಾಜಕಾರಣ ಭ್ರಷ್ಟಾಚಾರ ತಡೆಯಲು ಅರುಣ್ ಸಿಂಗ್ ಗೆ ಹೇಳಿದ್ದೇನೆ. ಏನು ನಡೆಯುತ್ತಿದೆ ಎಂಬುದನ್ನ ನೇರಾನೇರವಾಗಿ ಹೇಳಿದ್ದೇನೆ. ನಾನು ಪಕ್ಷದ ಸಿದ್ಧಾಂತ ಕಾರ್ಯಕ್ರಮದ ಬಗ್ಗೆ ಮಾತನಾಡಿಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಬಗ್ಗೆ ಮಾತ್ರ ಹೇಳಿದ್ದೇನೆ. ಪಕ್ಷದ ಸಿದ್ಧಾಂತಗಳನ್ನ ಪಾಲಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎಂಬ ಸಿದ್ಧಾಂತ ಪಾಲನೆ ಬಗ್ಗೆ ಹೇಳಿದ್ದೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಯಡಿಯೂರಪ್ಪಗೆ ಮೊದಲಿದ್ಧ ಶಕ್ತಿ ಈಗ ಇಲ್ಲ.  ಇದರಿಂದ ವಿಧಾನಸೌಧದ ಶಕ್ತಿ ಪೀಠ ಮುಸುಕಾಗುತ್ತಿದೆ. ನಾಯಕತ್ವ ಕುಸಿಯುತ್ತಿದೆ. ಇವರಿಂದ ಪ್ರಯೋಜನ ಇಲ್ಲ. ಕುಸಿದ ನಾಯಕತ್ವದಿಂದ ರಾಜ್ಯಕ್ಕೆ ಪ್ರಯೋಜನ ಇಲ್ಲ. ಯಡಿಯೂರಪ್ಪ ಗೌರವಿಸಿ ಸಿಎಂ ಮಾಡಿದ್ದೇವೆ. ನಮ್ಮ ಸಹಕಾರದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ.   ಈಗ ಸಮರ್ಪಕವಾದ ನಾಯಕತ್ವ ರಾಜ್ಯಕ್ಕೆ ಬೇಕಿದೆ ಎಂದರು.

ಬಿಎಸ್ ವೈ ಪುತ್ರ ವಿಜಯೇಂಧ್ರನಿಂದ ಹಸ್ತಕ್ಷೇಪವಾಗುತ್ತಿದೆ.ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪವಾಗುತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ. ಹೀಗಾಗಿ ವಿಜಯೇಂದ್ರ ದೆಹಲಿಗೆ ಹೋಗ್ತಾರೆ. ಬಿಎಸ್ ವೈ ಮೊದಲು ಮಕ್ಕಳಿಂದಲೇ ಜೈಲಿಗೆ ಹೋಗಿದ್ದರು. 2ನೇ ಬಾರಿಗೆ ಜೈಲಿಗೆ ಹೋಗಬಾರದು ಎಂದು ಹೆಚ್.ವಿಶ್ವನಾಥ್ ಹೇಳಿದರು.

ENGLISH SUMMARY….

H.Vishwanath accuses State Govt. of involving in a huge scam in the Rs.20,000 crore Irrigation Dept. tender
Bengaluru, June 18, 2021 (www.justkannada.in): BJP MLC H. Vishwanath who yesterday met the State BJP In-charge Arun Singh and demanded a replacement of the Chief Minister, today has made a serious allegation against the State Government.
He has accused the State Government of approving an Rs.20,000 crore worth tender of the Irrigation Department in a hurry. He alleged there is a huge scam in the tender.
Addressing a press meet held today he released some related documents and accused of a scam by the Kaveri Neeravari Nigama in the Bhadra Upper Bank project. He was accused of receiving kickbacks from the contractors.
“Family politics has gone out of control in the State. I have requested Arun Singh to stop family politics and corruption. I have explained everything. I am not speaking against the party ethics and programs. I am against only family politics and corruption. I have only proposed following the principles of the party. I questioned the party principle of not giving power to people above 75 years of age.
He alleged the interference of CM BSY’s son Vijendra in all the departments. “There is a case against him even in the ED. Hence, he will often go to Delhi. BSY had earlier went to jail because of his sons. However he should not go to jail again,” he said.
Keywords: BJP MLC/ H. Vishwanath/ Chief Minister B.S. Yedyurappa/ Vijendra/ Irrigation Department/ scam

Key words: irrigation department’- Rs 20,000 crore –tender-H.Vishwanath -allegation