ಐಪಿಎಲ್ ಪಂದ್ಯಗಳಲ್ಲಿ ಯಾವ ತಂಡಗಳಿಗೂ ಇರುವುದಿಲ್ಲ ‘ಹೋಂ ಸಪೋರ್ಟ್’!

Promotion

ಬೆಂಗಳೂರು, ಮಾರ್ಚ್ 08, 2021 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್​ನ (Indian Premier League) ಮೊದಲ ಪಂದ್ಯ ಚೆನ್ನೈನ ಎಂ.ಎ.ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಪ್ರಿಲ್ 9ಕ್ಕೆ ಆಯೋಜನೆಯಾಗಲಿದೆ.

ಬಳಿಕ, ಮೇ 30ರಂದು ಅಹಮದಾಬಾದ್​ನಲ್ಲಿ ಇರುವ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಈ ಬಾರಿಯ ಐಪಿಎಲ್ 2021 ಪಂದ್ಯಾವಳಿಗಳು ಏಪ್ರಿಲ್ 9, 2021ಕ್ಕೆ ಆರಂಭವಾಗಿ ಮೇ 30, 2021ರ ವರೆಗೆ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಗವರ್ನಿಂಗ್ ಕೌನ್ಸಿಲ್ (GC) ಅನುಮತಿ ಸಿಕ್ಕರೆ ಅಂದುಕೊಂಡಂತೆ ಏಪ್ರಿಲ್ 9ಕ್ಕೆ ಆರಂಭವಾಗಲಿದೆ.

ಈ ಹಿಂದೆ ಐಪಿಎಲ್ 2021 ಅನ್ನು ಒಂದೇ ನಗರದಲ್ಲಿ ಆಯೋಜಿಸಲಾಗುವುದು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಬಿಸಿಸಿಐ ಐದು ಅಥವಾ ಆರು ನಗರಗಳಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಲು ಯೋಚಿಸುತ್ತಿದೆ.