ಏಪ್ರಿಲ್ 15ರ ಬಳಿಕ ಐಪಿಎಲ್ ಭವಿಷ್ಯ ನಿರ್ಧಾರ

Promotion

ನವದೆಹಲಿ, ಮಾರ್ಚ್ 20, 2020 (www.justkannada.in): ಈ ವರ್ಷದ ಐಪಿಎಲ್ ಆವೃತ್ತಿ ಭವಿಷ್ಯ ಶೀಘ್ರವೇ ನಿರ್ಧಾರವಾಗಲಿದೆ.

ಈ ಬಾರಿಯ ಐಪಿಎಲ್ ನಡೆಯುತ್ತದೋ ಇಲ್ಲವೋ ಎಂಬ ಗೊಂದಲಗಳಿಗೆ ಏಪ್ರಿಲ್ 15 ರ ಬಳಿಕ ಉತ್ತರ ಸಿಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿವು ನೀಡಿದ್ದಾರೆ.

ಏಪ್ರಿಲ್ 15 ರ ಬಳಿಕ ಹೊಸದಾಗಿ ಸೂಚನೆ ನೀಡಲಾಗುವುದು. ಆ ಬಳಿಕ ಐಪಿಎಲ್ ಆಗಲಿ, ಇತರ ಕ್ರೀಡಾ ಕೂಟವಾಗಲಿ ಯಾವಾಗ ನಡೆಸಬೇಕು ಎಂದು ತೀರ್ಮಾನಿಸಬಹುದು ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಕೆಲವು ಮೂಲಗಳ ಪ್ರಕಾರ ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆಯಬಹುದು ಎನ್ನಲಾಗುತ್ತಿದೆ. ಆದರೆ ಇದೆಲ್ಲದಕ್ಕೂ ಏಪ್ರಿಲ್ 15 ರ ಬಳಿಕವಷ್ಟೇ ಉತ್ತರ ಸಿಗಲಿದೆ.