ಪಕ್ಷಕ್ಕೆ ಎಸ್.ಆರ್ ಪಾಟೀಲ್ ಗೆ ಆಹ್ವಾನ ನೀಡಿದ್ದೇವೆ: ಸುಮಾರು 20 ನಾಯಕರು ಜೆಡಿಎಸ್ ಸೇರುತ್ತಾರೆ- ಸಿಎಂ ಇಬ್ರಾಹಿಂ.

Promotion

ಬಾಗಲಕೋಟೆ,ಜೂನ್,28,2022(www.justkannada.in): ಜೆಡಿಎಸ್ ಸೇರುವಂತೆ ಎಸ್.ಆರ್ ಪಾಟೀಲ್ ಅವರಿಗೆ ಆಹ್ವಾನಿಸಲಾಗಿದೆ. ಸುಮಾರು 20 ನಾಯಕರು ಜೆಡಿಎಸ್ ಸೇರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಎಸ್ ಆರ್ ಪಾಟೀಲ್ ಗೆ ಒಂದು ಎಂಎಲ್ ಸಿ ಸೀಟ್ ಇಲ್ಲ ಅಂದ್ರೆ ಏನ್ರಿ..? ಹೀಗಾಗಿ ಜೆಡಿಎಸ್ ಸೇರಲು ಎಸ್.ಆರ್ ಪಾಟೀಲ್ ಗೆ  ಆಹ್ವಾನ ನೀಡಿದ್ದೇವೆ. ಅವರು ಬಂದರೇ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ಗುಜರಾತ್ ಜೊತೆಗೆ ಕರ್ನಾಟಕದಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ. ಇವರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮಾಡುವುದಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಚುನಾವಣೇ ವೇಳೆ ಸಚಿವರ ಸಿಡಿ ಹೊರಬರುತ್ತೆ. ಸಚಿವರು ಈಗಾಗಲೇ ಕೋರ್ಟ್ ಗೆ ಹೋಗಿ ಸ್ಟೆ ತೆಗೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

Key words:  invited -SR Patil-JDS-CM Ibrahim.