ನಮಗೆ ಲಂಚ ಅಂದ್ರೆ ಗೊತ್ತೇ ಇಲ್ಲ ಅಂತೀರಿ? : ಹಾಗಾದ್ರೆ ತನಿಖೆಗೆ ಒಪ್ಪಿಕೊಳ್ಳಿ- ಮಾಜಿ ಸಿಎಂ ಸಿದ್ಧರಾಮಯ್ಯ ಬಹಿರಂಗ ಸವಾಲು.

kannada t-shirts

ಮೈಸೂರು,ಆಗಸ್ಟ್, 26,2022(www.justkannada.in):  ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ 40% ಕಮಿಷನ್ ಆರೋಪ ಮಾಡಿದರೇ ಸಿಎಂ ಬೊಮ್ಮಾಯಿ ಅವರು  ಲೋಕಾಯುಕ್ತಕ್ಕೆ‌ ಹೋಗಿ ಅಂತಾರೆ. ನಾವು ನ್ಯಾಯಾಂಗ ತನಿಖೆ ನಡೆಸುವವರಿಗೆ  ದಾಖಲಾತಿ‌ ನೀಡಿದ್ದೇವೆ. ನೀವು ಪ್ರಾಮಾಣಿಕರಾಗಿದ್ದೀರಿ ಅಲ್ಲವೇ? ಹಾಗಾದರೇ ಎಲ್ಲರೂ ತನಿಖೆಗೆ ಒಪ್ಪಿಕೊಳ್ಳಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಬಹಿರಂಗ ಸವಾಲು ಹಾಕಿದ್ದಾರೆ.

ಪ್ರಸ್ತುತ ರಾಜಕೀಯ ಸನ್ನಿವೇಶ ಕುರಿತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಸೇರಿ ಹಲವರು ಭಾಗಿಯಾಗಿದ್ದರು.

ಸಂವಾದದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಜನರ ಆಶೀರ್ವಾದ ಪಡೆದು ಬಂದ ಸರ್ಕಾರವಲ್ಲ. ಇದು ಚುನಾಯಿತ ಸರ್ಕಾರವಲ್ಲ. ಅನೈತಿವಾಗಿ ರಚನೆಯಾದ ಸರ್ಕಾರ. ಕಳೆದ ಚುನಾವಣೆಯಲ್ಲಿ 104 ಸ್ಥಾನ ಮಾತ್ರ ಪಡೆದಿದ್ದರು. ಆದರೆ, ಪರ್ಸಂಟೇಜ್ ಆಫ್ ಓಟ್ ನೋಡಿದರೆ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿತ್ತು. 38.14 % ಮತ ಕಾಂಗ್ರೆಸ್ ಗೆ ಬಂದಿತ್ತು 34.% ಬಿಜೆಪಿ, 18% ಜೆಡಿಎಸ್ ಗೆ ಬಂದಿತ್ತು. ಹೆಚ್ಚು ಮತ ಪಡೆದರೂ, ಸೀಟು ಕಡಿಮೆ ಆಗಿತ್ತು. ಜನರು ಆಶೀರ್ವಾದ ಮಾಡಿಲ್ಲ.‌ ಆಮೇಲೆ ಯಡಿಯೂರಪ್ಪ ಎಂಎಲ್ ಎ ಕೊಂಡುಕೊಂಡು, ರಾಜೀನಾಮೆ ಕೊಡಿಸಿ, ಹಿಂಬಾಗಿಲ ಮೂಲಕ ಅಧಿಕಾರ ಪಡೆದುಕೊಂಡರು. ಎರಡು ವರ್ಷ ಬಿಎಸ್ ವೈ, ಒಂದು ವರ್ಷ  ಬೊಮ್ಮಾಯಿ ಸಿಎಂ ಆಗಿದ್ದಾರೆ. 2018 ರಲ್ಲಿ ಇವರು ಪ್ರಣಾಳಿಕೆ ನೀಡಿದ್ದರು. ರಾಜ್ಯದ ಜನರಿಗೆ ಅಧಿಕಾರಕ್ಕೆ ಬಂದರೆ ಏನ್ ಮಾಡ್ತೀವಿ ಅಂತ ಹೇಳಿದ್ರು. ಅಧಿಕಾರಕ್ಕೆ ಬಂದು ನಾಲ್ಕು ವರ್ಷ  ಆಗಿದೆ. ಪ್ರಣಾಳಿಕೆಯಲ್ಲಿ ಇದ್ದ ಭರವಸೆಗಳಲ್ಲಿ ಶೇ. 10 ರಷ್ಟು ಈಡೇರಿಸಿಲ್ಲ ಎಂದು ಆರೋಪಿಸಿದರು.

ಹಾಗೆಯೇ ನಾನು ವಿಧಾನಸಭೆ ಒಳಗೆ, ಹೊರಗೆ ಹೇಳಿದ್ದೀನಿ. ಈ ‌ಸಂಬಂಧ ಬಿಜೆಪಿ ಜೊತೆ ಚರ್ಚೆಗೆ ಸಿದ್ಧ. ಅವರು ಈ ವಿಚಾರವನ್ನ ಅಲ್ಲಗೆಳೆಯಲಿ ನೋಡೋಣಾ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು.

 ಬಡವರ ಅಕ್ಕಿ ನಿಲ್ಲಿಸುತ್ತೀವಿ ಎಂದು ಉಮೇಶ್ ಕತ್ತಿಗೆ ತಿರುಗೇಟು.

ನಾವು ಜಾರಿಗೊಳಿಸಿದ್ದ ಹಲವು ಕಾರ್ಯಕ್ರಮ ನಿಲ್ಲಿಸಿದ್ದಾರೆ. ಇತ್ತೀಚೆಗೆ ಉಮೇಶ್ ಕತ್ತಿ ಒಂದು ಹೇಳಿಕೆ ನೀಡಿದ್ದರು. ಕೇಂದ್ರ ಒಪ್ಪಿದರೆ ಬಡವರ ಅಕ್ಕಿ ನಿಲ್ಲಿಸ್ತೀವಿ ಎಂದಿದ್ದಾರೆ. ಅದರ ಅರ್ಥ ಅವರ ಮಂತ್ರಿಮಂಡಲ ಮಾತನಾಡುವುದನ್ನ ಹೇಳಿದ್ದಾರೆ. ಅದಕ್ಕೆ ಎರಡು ಕಾರಣಗಳಿರಬಹುದು. ಒಂದು ಅಕ್ಕಿ ನೀಡಲು ಹಣ ಇಲ್ಲದಿರಬಹುದು. ಎರಡನೆಯದು ಬಡವರ ವಿರೋಧಿ ಇರಬಹುದು ಎಂದು ಸಿದ್ಧರಾಮಯ್ಯ ಟೀಕಿಸಿದರು.

ಗುತ್ತಿಗೆದಾರರ ಸಮಸ್ಯೆಗೆ ಈವರಗೆ ಪರಿಹಾರ ಸಿಕ್ಕಿಲ್ಲ. ವರ್ಷ ಕಳೆದರೂ ಏನೂ ಪ್ರಯೋಜನವಾಗಿಲ್ಲ. ಪತ್ರ ಬರೆದ ಮೇಲೆ ಉಪಯೋಗಕ್ಕೆ ಬಂದಿಲ್ಲ. ಈವರೆಗೆ ಆರೋಪ‌ ಮಾಡಿದರೂ ಯಾವುದೇ ಕ್ರಮವಿಲ್ಲ. ಕಳೆದ 24 ರಂದು ನನ್ನನ್ನ ಕೆಂಪಣ್ಣ ನೇತೃತ್ವದ ನಿಯೋಗ ಭೇಟಿ ಆಗಿತ್ತು. ನನ್ನ ಬಳಿ ಅವರ ದೂರುಗಳನ್ನ ಹೇಳಿದರು. ಬೆಂಗಳೂರು ಕಾರ್ಪೊರೇಷನ್ ಅಲ್ಲಿ‌ ಶೇ.50 ರಷ್ಟಿದೆ. ಕೆಲವು ಕೇಸ್ ಗಳಲ್ಲಿ ಶೇ.100 ರಷ್ಟು ಭ್ರಷ್ಟಾಚಾರವಿದೆ. ಸಿಎಂ ಸೇರಿದಂತೆ ಎಲ್ಲ ಸಚಿವರೂ ಕಮಿಷನ್ ತೆಗೆದುಕೊಳ್ತಾರೆ. ಅದರಲ್ಲೂ ಮುನಿರತ್ನ ಡಿಮ್ಯಾಂಡ್ ಮಾಡಿ ತಗೋತಾರೆ ಎಂದು ಆರೋಪ ಮಾಡಿದರು.

ಆದರೆ ಬಸವರಾಜ‌ ಬೊಮ್ಮಾಯಿ ಲೋಕಾಯುಕ್ತಕ್ಕೆ‌ ಹೋಗಿ ಅಂತಾರೆ. ನೀವು ಪ್ರಾಮಾಣಿಕರಾಗಿದ್ದೀರಿ ಅಲ್ಲವೇ?. ನಮಗೆ ಲಂಚ ಅಂದ್ರೆ ಗೊತ್ತೇ ಇಲ್ಲ ಅಂತೀರಿ? ಸಿಎಂ, ಮುನಿರತ್ನ, ಸುಧಾಕರ್ ಎಲ್ಲರೂ ತನಿಖೆಗೆ ಒಪ್ಪಿಕೊಳ್ಳಿ. ರವಿಚೆಂಗಪ್ಪ ಎಂಬವರು ಬೋಪಯ್ಯ ಮೇಲೆ ಆರೋಪ ಮಾಡಿದ್ದಾರೆ. 2.5 ಕೋಟಿ ರೂ ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪ ಇದೆ. ನೀವೆಲ್ಲರೂ ತನಿಖೆಗೆ ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು.

ಏನೇ ಆರೋಪ ಮಾಡಿದ್ರು ದಾಖಲಾತಿ‌ ಕೇಳ್ತಾರೆ. ನಾನ್ಯಾವತ್ತೂ ಹರಿಶ್ಚಂದ್ರ ಅಂತ‌ ಹೇಳಿಕೊಂಡಿಲ್ಲ. ಅವರ ಮನೆಯವರೂ ನಾನಲ್ಲ. ಸಿದ್ಧರಾಮಯ್ಯ ಸಿದ್ದರಾಮಯ್ಯ ಮಾತ್ರ. ನನ್ನ ಕಾಲದಲ್ಲಿ ಹಗರಣ ಆಗಿದ್ದವು. ಐದು ಕೇಸ್ ಗಳನ್ನ ಸಿಬಿಐಗೆ ನೀಡಿದ್ದೆ. ಇವರದ್ದೆ ಸರ್ಕಾರ ಇತ್ತು, ಸಿಬಿಐಗೆ ಕೊಡ್ರಿ ಅಂತಿದ್ರು. ಕೇವಲ ಆರೋಪ ಬಂದ ತಕ್ಷಣ ಒತ್ತಡ ತರುತ್ತಿದ್ದರು. ಆದರೆ ಈಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಿದ್ದರೂ ಏನ್ ಮಾಡ್ತಾ ಇದ್ದಾರೆ. ಈವಾಗ ಸ್ವತಂತ್ರ ತನಿಖಾ ಸಂಸ್ಥೆಯಿಂದ‌ ತನಿಖೆ ನಡೆಸಿ ಎಂದು ಆಗ್ರಹಿಸಿದರು.

Key words:  investigate- Government –corruption- Former CM- Siddaramaiah-mysore

ENGLISH SUMMARY…

You say don’t know the meaning of bribe: Why don’t you agree for an investigation – Former CM Siddaramaiah
Mysuru, August 26, 2022 (www.justkannada.in): “The Chief Minister Basavaraj Bommai the contractors’ association which is alleging 40% commission against the BJP government, to appeal before the Lokayuta. We have provided the documents to the people who do judicial enquiry. You people claim to be honest. Then why don’t you agree to face the investigation,” challenged leader of the opposition Siddaramaiah.
An interaction program on the present political situation in the State was held at the Mysuru District Journalists Association today, with the former Chief Minister. MDJA President S.T. Ravikumar, Chief Secretary Subramanya and others were participated.
During the interaction Siddaramaiah informed, “the BJP has completed three years in power in the State. It is not a government which came to power by the people’s mandate. It is not an elected government. It is an unethically formed government. They had won only 104 seats in the last elections. But the percentage of vote was more for Congress. The Congress had earned 38.14% votes, where as the BJP had received 34%, followed by JDS 18%. Though they won more number of seats, there was shortage. Hence, it cannot be people’s mandate. It means people did not bless the BJP. Later, as everyone knows BSY purchased MLAs, and came to power through back door entry. After that BSY was the CM for two years and Basavaraj Bommai has completed one year. In the 2018 manifesto they had given several promises. They have already completed four years. But they have not fulfilled even 10% of the assurances mentioned in the manifesto,” he alleged.
Keywords: Leader of the opposition/ Siddaramaiah/ BJP/ State Govt

website developers in mysore