ಆಕ್ರಮ ಟಿಡಿಆರ್ ಹಗರಣ: ಏಕಕಾಲದಲ್ಲಿ ನಾಲ್ಕು ಕಡೆ ಎಸಿಬಿ ದಾಳಿ: ದಾಖಲೆ ಪರಿಶೀಲನೆ…

Promotion

ಬೆಂಗಳೂರು,ಆ,25,2020(www.justkannada.in): ಆಕ್ರಮ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಇಂದು ಬೆಂಗಳೂರಿನ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.jk-logo-justkannada-logo

ಇಬ್ಬರು ಬ್ರೋಕರ್ ಗಳು, ಜಮೀನು ಮಾಲೀಕ ಹಾಗೂ ಓರ್ವ ಸಹಾಯಕ ಇಂಜಿನಿಯರ್ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ.  ಸಹಾಯಕ ಇಂಜಿನಿಯರ್ ದೇವರಾಜು, ಬ್ರೋಕರ್ ಗಳಾದ ನಾಗೇಶ್ ಮತ್ತು ನಾಗರಾಜು, ಮಾಲೀಕ ಎಂದು ಮೋಸ ಮಾಡಿದ್ದ ನಿವೃತ್ತ ಗ್ರಾಮ ಲೆಕ್ಕಿಗ ಸುಬ್ಬಾರಾವ್ ಮನೆಗಳ ಮೇಲೆ  ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕು  ರಾಂಪುರದ ಸರ್ವೆ ನಂಬರ್ 149 ರಲ್ಲಿ ಆಕ್ರಮ ಟಿಡಿಆರ್ ಮಂಜೂರಾಗಿತ್ತು. 1,6151 ಚದರ ಆಕ್ರಮ ಮಂಜೂರಾಗಿತ್ತು. ಸುಮಾರು 28 ಕೋಟಿ ನಷ್ಟ ಎಂದು ಅಂದಾಜಿಸಿ ದೂರು ದಾಖಲಾಗಿತ್ತು. ಈ ಕುರಿತು ಎಸಿಬಿಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಹೀಗಾಗಿ ಇಂದು ಎಸಿಬಿ ಎಸ್ಪಿ ಕಲಾಕೃಷ್ಣ ಸ್ವಾಮಿ ನೇತೃತ್ವದ ತಂಡದಿಂದ ನಾಲ್ಕು ಕಡೆ ದಾಳಿ ನಡೆಸಿದೆ.

ಹೆಚ್.ಎಸ್ ಆರ್ ಲೇಔಟ್ ನಲ್ಲಿರುವ ಸಹಾಯಕ ಇಂಜಿನೀಯರ್ ದೇವರಾಜ್ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ. ಬ್ರೋಕರ್ ನಾಗೇಶ್ ಮನೆಯಲ್ಲೂ ಏಳಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. Invasion –TDR- scam- ACB -attack –bangalore

ಬಿದರಹಳ್ಳಿಯ ಕಣ್ಣೂರು ಗ್ರಾಮದಲ್ಲಿರುವ ಐಷಾರಾಮಿ ಮನೆಯಲ್ಲಿ ಪರಿಶೀಲಿಸುತ್ತಿದ್ದು, ಪತ್ತೆಯಾದ ದಾಖಲೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಆಕ್ರಮ ಟಿಡಿಆರ್ ಪ್ರಕರಣ ಸಂಬಂಧ ಸಹಾಯಕ ಇಂಜಿನಿಯರ್ ದೇವರಾಜ ಬಂಧನ ಆಗಿತ್ತು. ಕಳೆದ ವರ್ಷ ಡಿಸೆಂಬರ್ ನಲ್ಲಿ ಎಸಿಬಿ ದೇವರಾಜರನ್ನ ಬಂಧನ ಮಾಡಿತ್ತು. ಆಗ ಕೆಆರ್ ಪುರಂ ಬಳಿಯ ಕೌದೇನಹಳ್ಳಿ ಸಮೀಪ ಆಕ್ರಮ ಡಿಆರ್ ಸಿ ನೀಡಿದ ಸಂಬಂಧ ಬಂಧನವಾಗಿತ್ತು. ಈಗ ರಾಂಪುರ ಸರ್ವೇ ನಂಬರ್ ನಲ್ಲಿ ಆಕ್ರಮ ಸಂಬಂಧ ಎಸಿಬಿ ದಾಳಿಯಾಗಿದೆ.

Key words: Invasion –TDR- scam- ACB -attack –bangalore