ಇನ್ಸ್‌ಸ್ಟಾಗ್ರಾಂ ನಿಂದ ಹೊಸ ಫೀಚರ್ ಪರಿಚಯ!

Promotion

ಬೆಂಗಳೂರು, ಡಿಸೆಂಬರ್ 17, 2021 (www.justkannada.in): ಇನ್‌ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಹೊಸ ಫೀಚರ್ ವೊಂದನ್ನು ನೀಡಿದೆ.

ಸ್ಟೋರಿ ಫೀಡ್‌ಗಳ ಮೂಲಕ ಇನ್ನು ಮುಂದೆ 60 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಲು ಇದೀಗ ಅವಕಾಶ ಕಲ್ಪಿಸಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ 15 ಸೆಕೆಂಡ್‌ಗಳಿಗಿಂತ ಹೆಚ್ಚಿನ ಅವಧಿಯ ವಿಡಿಯೋಗಳನ್ನು ಬಳಕೆದಾರರು ಅಪ್ಲೋಡ್ ಮಾಡಿದರೆ ಅದು ಭಾಗಗಳಾಗಿ ಪೋಸ್ಟ್‌ ಆಗುತ್ತದೆ.

ಆದರೀಗ ಅದು 60 ಸೆಕೆಂಡ್ ಗಳ ವರೆಗೆ ಮುಂದುವರಿಯಲಿದೆ. ಇನ್ನು ಫೇಸ್ಬುಕ್‌ನ ಹೆಸರು ಮೆಟಾ ಆಗಿ ಅಕ್ಟೋಬರ್‌ನಲ್ಲಿ ಬದಲಾದ ವಾರದ ಒಳಗೆ ಇನ್‌ಸ್ಟಾಗ್ರಾಂ ತನ್ನ ಒಟ್ಟಾರೆ ಬಳಕೆದಾರರ ಬಳಗವು ಎರಡು ಶತಕೋಟಿ ದಾಟಿರುವುದನ್ನು ಕಂಡಿದೆ.

ಬಳಕೆದಾರರ ಸಂಖ್ಯೆ ಶತಕೋಟಿ ದಾಟಿದ ಬಳಿಕ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಬಹಿರಂಗವಾಗಿ ತೋರುವ ಪರಿಪಾಠಕ್ಕೆ ಇನ್‌ಸ್ಟಾಗ್ರಾಂ ಮುಂದಾಗಿದೆ.