ಮೈಸೂರು- ಬೆಂಗಳೂರು : ‘ ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳದ್ದೆ ಕಾರುಬಾರು..!

Promotion

 

ಮೈಸೂರು, ಮಾ.05, 2020 : (www.justkannada.in news ) ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ಎಲ್ಲರ ಗಮನ ಸೆಳೆಯಿತು.

ಮಾರ್ಚ್ 1 ರಿಂದ ಮಾರ್ಚ್ 10 ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆಯ ಅಭಿಯಾನವನ್ನು ಭಾರತೀಯ ರೈಲ್ವೆಯಾದ್ಯಂತ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ವತಿಯಿಂದ ಇಂದು ಈ ವಿನೂತನ ಪ್ರಯತ್ನ ನಡೆಸಲಾಯಿತು.

ಈಗಾಗಲೇ ಮೈಸೂರು ವಿಭಾಗವು ಆರೋಗ್ಯ ತಪಾಸಣೆ, ಯೋಗ ಶಿಬಿರಗಳು, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ, ಲಿಂಗ ಸಮಾನ ಕೆಲಸದ ಸ್ಥಳವನ್ನು ನಿರ್ಮಿಸಲು ಮತ್ತು ಕೆಲಸದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣದ ಮನೋಭಾವಕ್ಕೆ ಪೂರಕವಾಗಿ ಈ ಚಟುವಟಿಕೆ ನಡೆಸಲು ಉದ್ದೇಶಿಸಿದೆ.

International Women’s Day -campaign- Mysuru railways Division

ಈ ಸಲುವಾಗಿ ರೈಲ್ವೆ ವಿಭಾಗದ ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್, ಗಾರ್ಡ್, ಟಿಕೆಟ್ ಪರಿಶೀಲನಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳನ್ನು ಒಳಗೊಂಡ ಎಲ್ಲ ಮಹಿಳಾ ಸಿಬ್ಬಂದಿ ಗುರುವಾರದ ಅಭಿಯಾನದಲ್ಲಿ ಭಾಗವಹಿಸಿದ್ದರು.
ಈ ವರ್ಷದ ಅಭಿಯಾನ “ಪ್ರತಿಯೊಬ್ಬರಿಗೂ ಸಮಾನ” ವಿಷಯಕ್ಕೆ ಪೂರಕವಾಗಿ ಉತ್ಸಾಹಕ್ಕೆ ತಕ್ಕಂತೆ ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಇಂದು ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಶುಭಾಶಯ ಕೋರಿದರು. ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ದೇವಸಹಾಯಂ, ಹಿರಿಯ ಶಾಖಾ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು

key words : International Women’s Day -campaign- Mysuru railways Division

International Women’s Day campaign on Mysuru Division

International Women’s Day 2020 campaign has been launched all over Indian Railways for 10 days from 1st March to 10th March. Mysuru division is organizing various activities like health checkups, yoga camps, trekking, cultural and sports competitions, to build a gender equal workplace and to salute the spirit of women empowerment in all spheres of working. True to the spirit of this year’s theme for campaign “ Each for Equal”, an all-women crew comprising Loco Pilot and Asst.Loco Pilot , Guard, Ticket Checking Staff, Security Personnel were on duty onboard Mysuru-Bengaluru Tippu Express today to underscore the commitment of the Railways to create a gender equal workforce to achieve all round development of the organization.

Greeting the all-women contingent at Mysuru station on this momentous occasion, Divisional Railway Manager, Mysuru, Smt. Aparna Garg said that over 10% of the workforce in the Division were women and the primary focus was to bring about a qualitative change in the work culture by creating a gender equal environment. Influence collective consciousness among staff to achieve higher productivity at all levels was one of the ethos of the Division, she added. The DRM reminded the large gathering of women employees present that work speaks more than words and called upon everyone to excel in their respective fields so that the there would be perceptible change in standard of service provided by the Railways.

Additional Divisional Railway Manager, Mysuru Shri A Devasahayam, Senior Branch Officers and supervisors were present on this occasion.