ಅಂತಾರಾಷ್ಟ್ರೀಯ ಕೊಡವ ಭಾಷಾ ಪೈಪೋಟಿಯಲ್ಲಿ ಕೊಡಗು ತಂಡ ಚಾಂಪಿಯನ್

Promotion

ಬೆಂಗಳೂರು, ಸೆಪ್ಟೆಂಬರ್ 26, 2021 (www.justkannada.in): ಅಂತಾರಾಷ್ಟ್ರೀಯ ಕೊಡವ ಭಾಷಾ ಪೈಪೋಟಿಯಲ್ಲಿ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಮೆರಿಕದ ಬಲ್ಲಚಂಡ ನಯನ ಹಾಗೂ ತಂಡದವರು ಮರ್ಕಾರ ಹೋಮ್ ಆಫೀಸ್ ಸಹಯೋಗದಲ್ಲಿ ನಡೆಸಿದ ಗ್ಲೋಬಲ್ ಕೊಡವ ತಕ್ಕ್ ಆಫ್ 2021 ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಕೊಡಗು ತಂಡ ಹೆಚ್ಚು ಅಂಕ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ವೆಬಿನಾರ್ ಮೂಲಕ ನಡೆದ ಸ್ಪರ್ಧೆಯನ್ನು ಹಲವು ದೇಶಗಳ ಕೊಡವಾಭಿಮಾನಿಗಳು ವೀಕ್ಷಿಸಿ ಓಟ್ ಮಾಡಿದರು.
ಕೊಡಗು ತಂಡದೊಂದಿಗೆ ಅಮೆರಿಕ, middle-east ಹಾಗೂ ಬೆಂಗಳೂರು ತಂಡಗಳು ಭಾಗವಹಿಸಿದ್ದವು.

ಕೊಡವ ಭಾಷೆಯ ಹಿಡಿತ, ಪ್ರಸ್ತುತಪಡಿಸುವ ಶೈಲಿ, ವಿಷಯದ ಅಧ್ಯಯನ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಇದಲ್ಲದೆ ರಸಪ್ರಶ್ನೆ ಕಾರ್ಯಕ್ರಮವು ನಡೆಯಿತು. ಇದರಲ್ಲಿ ಕೊಡಗು ತಂಡದ ಚೇಂದಂಡ ಶಮಿ ಮಾದಯ್ಯ ಮೊದಲ ಸ್ಥಾನ ಗಳಿಸಿದರು.

ಕೊಡಗು ತಂಡದ ಪರವಾಗಿ ಡಾ. ತಿತೀರ ರೇಖಾ ವಸಂತ್, ಐತಿಚಂಡ ರಮೇಶ್ ಉತ್ತಪ್ಪ, ಚೆಯ್ಯಂಡ ಸತ್ಯ ಗಣಪತಿ, ಚೇಂದಂಡ ಶಮಿ ಮಾದಯ್ಯ, ಚೋಕಿರ ಅನಿತಾ ದೇವಯ್ಯ,‌ ಕ್ಯಾಲೇಟಿರ ಪವಿತ್ ಪೂವಯ್ಯ, ಬಾಳೆಯಡ ದಿವ್ಯ ಮಂದಪ್ಪ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ , ಬೆಂಬಲ ನೀಡಿ ಓಟ್ ಮಾಡಿದ ಎಲ್ಲ ಅಭಿಮಾನಿಗಳಿಗೂ ಕೊಡಗು ತಂಡ ಧನ್ಯವಾದ ಅರ್ಪಿಸಿದೆ.

key words: International Kodava Language Competition: Kodagu team champion