ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೊರಡಿಸಿರುವ ಮಧ್ಯಂತರ ತೀರ್ಪು

ಬೆಂಗಳೂರು, ಮಾರ್ಚ್ 26, 2022 (www.justkannada.in): ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ / ನ್ಯಾಯಾಲಯವು (MUDA) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಶ್ರೀಮತಿ ಕಲ್ಪನ ಎಂಬುವವರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಸಂಖ್ಯೆ: 1164/2017 ರಲ್ಲಿ ಸದರಿ ಪ್ರಾಧಿಕಾರವು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 39ನ್ನು ಉಲ್ಲಂಘಿಸಿ ಯಾವುದೇ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡುವಂತಿಲ್ಲ
ಹಾಗಾಗಿ ಗೃಹ ನಿರ್ಮಾಣ ಸಂಘದ ಸದಸ್ಯರ ಹಿತ ಪಾಪಾಡುವ ದೃಷ್ಠಿಯಲ್ಲಿ ಪ್ರಾಧಿಕಾರವು ಈ ಕಾಯ್ದೆಯ ಯಾವುದೇ ಅಂಶಗಳನ್ನು ಉಲ್ಲಂಘಿಸದೆ ನಿವೇಶನ ಹಂಚಿಕೆ ಕ್ರಮ ಅನುಸರಿಸಬೇಕೆಂದು ಮಧ್ಯಂತರ ಆದೇಶ ನೀಡಿ, ಶ್ರೀಮತಿ ಕಲ್ಪನರವರು ನಿವೇಶನ ಹಂಚಿಕೆ ಕೋರಿರುವ ಬಡಾವಣೆಯಲ್ಲಿ ಈ ರೀತಿಯ ಎಷ್ಟು ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ದಿನಾಂಕ: 09-06-2022 ರೊಳಗೆ ರಾಜ್ಯ ಗ್ರಾಹಕರ ಆಯೋಗಕ್ಕೆ ಸಲ್ಲಿಸುವಂತೆ ಸೂಚನೆ ನೀಡಿ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಮತ್ತು ಸದಸ್ಯರನ್ನೊಳಗೊಂಡ ಪೀಠ ದಿನಾಂಕ: 21-03-2022 ರಂದು ಆದೇಶಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.