ಮತಗಟ್ಟೆ ಸಂಖ್ಯೆ ಅದಲು ಬದಲು, ಆರಂಭವಾಗದ ಮತದಾನ…!

Promotion

ದಾವಣಗೆರೆ,ಡಿಸೆಂಬರ್,22,2020(www.justkannada.in)  : ತಾಲ್ಲೂಕಿನ ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ಸಂಖ್ಯೆ ಅದಲು ಬದಲಾಗಿ ಗೊಂದಲ ಉಂಟಾಗಿದೆ. ಮತದಾನವೇ ಆರಂಭಗೊಂಡಿಲ್ಲ.Teachers,solve,problems,Government,bound,Minister,R.Ashokಹೆಬ್ಬಾಳು ಬಡಾವಣೆ ಮತ್ತು ಹೆಬ್ಬಾಳು ವಾರ್ಡ್ ಗಳು ಅದಲು-ಬದಲು ಆಗಿರುವುದೇ ಗೊಂದಲಕ್ಕೆ ಕಾರಣವಾಗಿದೆ. ಮತಗಟ್ಟೆ 108 ಮತ್ತು 109 ಸಂಖ್ಯೆಗಳು ಆಚೀಚೆ ಆಗಿವೆ. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸಿಲ್ದಾರ್ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.Instead,booth,number,Voting,not,started ...!ಮತ ಚಲಾಯಿಸಲು ಬಂದವರನ್ನು ಸಮಾಧಾನ ಪಡಿಸಿ ವಾಪಸ್ ಕಳುಹಿಸಿದ್ದಾರೆ. ಸರಿಪಡಿಸುವ ಅಥವಾ ಚುನಾವಣೆ ಮುಂದೂಡುವ ಬಗ್ಗೆ ಮಮತಾ ಹೊಸಗೌಡರ್, ಗಿರೀಶ್, ಪಿಡಿಒ ಶುಭಲಕ್ಷ್ಮಿ, ವಿವಿಧ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

key words : Instead-booth-number-Voting-not-started …!