ಕೆ.ಆರ್ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ: ಪೋಷಕರ ಎದುರೇ ನರಳಿ ನರಳಿ ಪ್ರಾಣಬಿಟ್ಟ 25 ವರ್ಷದ ಗೃಹಿಣಿ…

ಮೈಸೂರು,ಆ,15,2019(www.justkannada.in): ಆಸ್ಪತ್ರೆಗಳಲ್ಲಿ ವೈದ್ಯರು ಸಕಾಲದಲ್ಲಿ ಸಿಗದಿದ್ದರೇ ರೋಗಿಯ ಪ್ರಾಣಕ್ಕೆ  ಕುತ್ತು ಬಂದು ಜೀವವೇ ಹೋಗುವಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇಂತಹದೊಂದು ಘಟನೆ ಇದೀಗ ಮೈಸೂರಿನ ಕೆ.ಆರ್ ಆಸ್ಪತ್ರೆ  ನಡೆದಿದೆ.

ಹೌದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಗೃಹಿಣಿಯೋರ್ವಳು ಪೋಷಕರ ಎದುರೇ ನರಳಿ ನರಳಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಜಿಲ್ಲೆಯ  ಕೆ.ಆರ್ ಆಸ್ಪತ್ರೆಯಲ್ಲಿ ನಡೆದಿದೆ.

ಶಿಲ್ಪ(25) ಎಂಬುವವರೇ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ನರಳಿ ನರಳಿ ಪ್ರಾಣ ಬಿಟ್ಟ  ಮಹಿಳೆ. ಶಿಲ್ಪಾ ಹೆಚ್.ಡಿ.ಕೋಟೆ ತಾಲೂಕಿನ ಮಾದಪುರ ಗ್ರಾಮದ ನಿವಾಸಿಯಾಗಿದ್ದು,  ಕಳೆದ ರಾತ್ರಿಯಷ್ಟೇ ಅಪೇಂಡಿಕ್ಸ್ ಖಾಯಿಲೆ ಎಂದು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರಾತ್ರಿ ಕೆ.ಆರ್. ಆಸ್ಪತ್ರೆಯಲ್ಲಿ  ಯಾರು ಕೂಡ ವೈದ್ಯರ ಇರಲಿಲ್ಲ.

ಹೀಗಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಶಿಲ್ಪಾ ಪ್ರಾಣ ಬಿಟ್ಟಿದ್ದಾರೆ. ಪೋಷಕರೇದುರೇ ಶಿಲ್ಫಾ ನರಳಿ ನರಳಿ ಸಾವನ್ನಪ್ಪಿದ್ದು  ಶಿಲ್ಪಾ ಅವರ ಮೃತದೇಹ ಹಿಡಿದು ಪೋಷಕರು ಆಸ್ಪತ್ರೆಯ ಆವರಣದಲ್ಲಿ ಓಡಾಡಿ ಅಸಹಾಯಕರಾದರು. ನಂತರ ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸೂಕ್ತ ಚಿಕಿತ್ಸೆ ಸಿಗದೆ  ವೈದ್ಯರ ಕೊರತೆಯಿಂದಾಗಿಯೇ ಶಿಲ್ಪಾ ಪ್ರಾಣ ಬಿಟ್ಟಿದ್ದಾರೆ ಎಂದು ಕೆ.ಆರ್ ಆಸ್ಪತ್ರೆಯ ವೈದ್ಯರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Inhumane incident – KR hospital-housewife – died -in front -her parents.