ಸಮಾಜದಲ್ಲಿ ಅಸಮಾನತೆ ಇದ್ದರೆ ಅದಕ್ಕೆ ಶ್ರೇಣಿಕೃತ ವ್ಯವಸ್ಥೆಯೇ ಕಾರಣ- ಆರ್ ಎಸ್ ಎಸ್ ವಿರುದ್ಧ ಮತ್ತೆ ಸಿದ್ಧರಾಮಯ್ಯ ಗುಡುಗು.

Promotion

ಬೆಂಗಳೂರು,ಆಗಸ್ಟ್,9,2022(www.justkannada.in):  ಆರ್ ಎಸ್ ಎಸ್ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿ ಆರ್ ಎಸ್ ಎಸ್ ವಿರುದ್ಧ ಗುಡುಗಿದ ಸಿದ್ಧರಾಮಯ್ಯ, 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಯಿತು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲೆ  ಆರ್ ಎಸ್ ಎಸ್ ಹುಟ್ಟಿಕೊಂಡಿತ್ತು ಆರ್ ಎಸ್ ಎಸ್ ನ ರಾಜಕೀಯ ಮುಖವಾಣಿ ಜನ ಸಂಘ. ಈಗ ಬಿಜೆಪಿಯವರು ಘರ್ ಘರ್ ತಿರಂಗಾ ಎಂದು ಮಾಡುತ್ತಿದ್ದಾರಲ್ಲ ಗೋಲವಾಲ್ಕರ್, ಸಾವರ್ಕರ್, ಆರ್ಗನೈಜರ್ ಪತ್ರಿಕೆಯಲ್ಲಿ ತ್ರಿವರ್ಣ ಧ್ವಜ ವಿರೋಧಿಸಿದರು.  ಆರ್ ಎಸ್ ಎಸ್ ಕಚೇರಿಯಲ್ಲಿ 50 ವರ್ಷ ರಾಷ್ಟ್ರಧ್ವಜ ಹಾರಿಸಲಿಲ್ಲ. ಇದನ್ನ ಮೊದಲಿಂದಲೂ ನಾವು ಎಬಿವಿಪಿ ವಿರೋಧಿಸಿಕೊಂಡು ಬಂದವರು ಎಂದರು.

ಆರ್ ಎಸ್ ಸ್ ಮೇಲ್ಜಾತಿಯವರ ಆಸೋಸಿಯೇಷನ್ ಅಷ್ಟೆ. ಚಾತುರ್ವರ್ಣ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಇದರಿಂದ ಅಸಮಾನತೆ ಮುಂದುವರೆಯುತ್ತದೆ. ಅಸಮಾನತೆಯಿಂದ ಗುಲಾಮಗಿರಿಗೆ ಕಾರಣವಾಗುತ್ತೆ, ಹಿಂದೂಮಹಾಸಭಾ, ಭಜರಂಗ ದಳ ಇವುಗಳಲ್ಲಿ ನಂಬಿಕೆ ಇಟ್ಟವರು.    ರಾಜಕೀಯ, ಆರ್ಥಿಕ,ಸಾಮಾಜಿಕ ಅಸಮಾನತೆಗೆ ಇವರೇ ಕಾರಣ. ಸಮಾಜದಲ್ಲಿ ಅಸಮಾನತೆ ಇದ್ದರೆ ಅದಕ್ಕೆ ಶ್ರೇಣಿಕೃತ ವ್ಯವಸ್ಥೆಯೇ ಕಾರಣ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: inequality – society – hierarchical –system- Siddaramaiah