ಹಾರುತ್ತಿದ್ದ ವಿಮಾನದಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆ….

Promotion

ಬೆಂಗಳೂರು, ಮಾರ್ಚ್,17,2021 (www.justkannada.in): ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ೬ಇ ೪೬೯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಂತಹ ಓರ್ವ ಮಹಿಳೆಗೆ ಹೆಣ್ಣು ಮಗು ಜನಿಸಿದೆ.jk

ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.  ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಂತಹ ಡಾ. ಸುಬ್ಬಣ್ಣ ನಜೀರ್ ಅವರು ಮಹಿಳೆಯ ಹೆರಿಗೆಗೆ ನೆರವಾದರು. ಜತೆಗೆ ಇಂಡಿಗೊ ಸಂಸ್ಥೆಗೆ ಸೇರಿದ ವಿಮಾನದ ಸಿಬ್ಬಂದಿಗಳು ಸಹ ಮಗುವಿನ ಹೆರಿಗೆಗೆ ಸಹಾಯ ಮಾಡಿದರು.

ಈ ಕುರಿತಂತೆ ಕೂಡಲೇ ಜೈಪುರ್ ವಿಮಾನನಿಲ್ದಾಣಕ್ಕೆ ಮಾಹಿತಿ ಒದಗಿಸಿದ ಸಿಬ್ಬಂದಿಗಳು, ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಓರ್ವ ವೈದ್ಯರು ಹಾಗೂ ಆಂಬುಲೆನ್ಸ್ ಅನ್ನು ಸಿದ್ಧವಾಗಿರಿಸುವಂತೆ ಸೂಚಿಸಿದ್ದರು. ಇದೀಗ ಸದ್ಯ ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ.indigo-6e-469-woman-delivers-baby-board-indigo-flight-bangalore-to-jaipur-flight

ಜೈಪುರ ವಿಮಾನ ನಿಲ್ದಾಣದ ಸಿಬ್ಬಂದಿಗಳು ಮಹಿಳೆಯ ಹೆರಿಗೆಗೆ ನೆರವಾದಂತಹ ಡಾ. ನಜೀರ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿ ಧನ್ಯವಾದಗಳನ್ನು ತಿಳಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

Keywords: Indigo 6E 469/ Woman –delivers- baby -board -Indigo flight/ Bangalore to Jaipur -flight