ಭಾರತೀಯ ಸೇನೆ ಮತ್ತು ಪೊಲೀಸರ ಅತಿದೊಡ್ಡ ಕಾರ್ಯಾಚರಣೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ.

Promotion

ಜಮ್ಮುಕಾಶ್ಮೀರ,ಡಿಸೆಂಬರ್,24,2022(www.justkannada.in): ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರ ಅತಿದೊಡ್ಡ ಕಾರ್ಯಾಚರಣೆ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರಕಾಶ್ಮೀರದ  ಬಾರಾಮುಲ್ಲಾ ಜಿಲ್ಲೆಯ ಉರಿಯ ಹತ್ಲಂಗಾ ಸೆಕ್ಟರ್‌ನಲ್ಲಿ ಸೇನೆಯೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ 8 ಎಕೆ 74ಯು, 24 ಎಕೆ 74 ಮ್ಯಾಗಜಿನ್‌ಗಳು, 12 ಚೈನೀಸ್ ಪಿಸ್ತೂಲ್‌ಗಳು, 24 ಪಿಸ್ತೂಲ್ ಮ್ಯಾಗಜೀನ್‌ ಗಳು, 9 ಚೈನೀಸ್ ಗ್ರೆನೇಡ್‌ಗಳು, 5 ಪಾಕ್ ಗ್ರೆನೇಡ್‌ಗಳು, 5 ಗೋಧಿ ಚೀಲಗಳು, 81 ಪಾಕ್ ಬಲೂನ್‌ಗಳು, 560 ರೌಂಡ್‌ಗಳ ಎಕೆ ರೈಫಲ್‌ಗಳು ಮತ್ತು 24 ರೌಂಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರಿ ಶಸ್ತ್ರಸಜ್ಜಿತ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

Key words: Indian Army-Jammu-Kashmir –Police- biggest operation