ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಿದ ಭಾರತೀಯ ಸೇನೆ: ಓರ್ವ ಯೋಧ ಹುತಾತ್ಮ…

Promotion

ಜಮ್ಮುಕಾಶ್ಮೀರ,ಜೂ,18,2019(www.justkannada.in):  ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಮುಂದುವರೆದಿದ್ದು, ಇಬ್ಬರು ಉಗ್ರರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರ ನಡುವೆ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನ ಮರ್ಹಮಾ ಸಂಗಮ್ ಗ್ರಾಮದಲ್ಲಿ ಇಂದು ಮುಂಜಾನೆ  ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಮನೆಯೊಂದನ್ನು ಸುತ್ತುವರಿದ ಭದ್ರತಾಪಡೆ ಸಿಬ್ಬಂದಿ ಶರಣಾಗುವಂತೆ ಉಗ್ರರಿಗೆ ಸೂಚಿನೆ ನೀಡಿದರು. ಆದರೆ, ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ಸಮಯದಲ್ಲಿ ಭದ್ರತಾಪಡೆಗಳು ಪ್ರತಿದಾಳಿ ನಡೆಸಿವೆ.

ಈ  ಸಂದರ್ಭದಲ್ಲಿ ಸೇನೆಯ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದು, ಘಟನಾ ಪ್ರದೇಶದಲ್ಲಿ ಇನ್ನೂ ಉಗ್ರರು ಅಡಗಿರುವ ಸಾಧ್ಯತೆ ಇದೆ. ಹೀಗಾಗಿ ಸೇನೆ ಶೋಧ ಕಾರ್ಯಾಚರಣೆ  ಮುಂದುವರೆಸಿವೆ.

Key words: Indian Army-fired –terrorist-  dead- Jammu and Kashmir.