ನಮ್ಮ ಸೈನಿಕರ ಬಲಿದಾನ ವ್ಯರ್ಥ ಆಗಲು ಬಿಡಲ್ಲ- ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪ್ರಧಾನಿ ಮೋದಿ ಹೇಳಿಕೆ…

Promotion

ನವದೆಹಲಿ,ಜೂ,17,2020(www.justkannada.in): ನಮ್ಮ ಯೋಧರು ಹೋರಾಡುತ್ತಲೇ ಹುತಾತ್ಮರಾಗಿದ್ದಾರೆ.  ನಮ್ಮ ಸೈನಿಕರ ಬಲಿದಾನ ವ್ಯರ್ಥ ಆಗಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕೇಂದ್ರ ಸಚಿವರು ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ. ಭಾರತ –ಚೀನಾ ಸಂಘರ್ಷದ ವೇಳೆ ಹುತಾತ್ಮರಾದ ಯೋಧರಿಗೆ ಈ ವೇಳೆ ಪ್ರಧಾನಿ ಮೋದಿ, ಎಲ್ಲಾ ರಾಜ್ಯಗಳ ಸಿಎಂಗಳು, ಕೇಂದ್ರ ಸಚಿವರು ಮೌನಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.india-china-conflict-soldiers-prime-minister-pm-narendra-modi

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಯೋಧರು ಹೋರಾಡುತ್ತಾ ಹುತಾತ್ಮರಾಗಿದ್ದಾರೆ.  ನಮ್ಮ ಸೈನಿಕರ ಬಲಿದಾನ ವ್ಯರ್ಥ ಆಗಲು ಬಿಡಲ್ಲ. ಭಾರತದ ಮೇಲೆ ಯಾರೇ ದಾಳಿ ಮಾಡಿದ್ರೂ ಅದಕ್ಕೆ ಪ್ರತ್ಯುತ್ತರ ನೀಡ್ತೇವೆ. ಯಾವುದೇ ಸಮಯದಲ್ಲಿ ಪ್ರತ್ಯುತ್ತರ ನೀಡರು ಭಾರತ ಸಿದ್ಧ. ಭಾರತ ಯಾರನ್ನೂ ಪ್ರಚೋದಿಸುವುದಿಲ್ಲ.ದೇಶದ ಅಖಂಡತೆ ಜತೆ ಯಾವುದೇ ರಾಜಿ ಇಲ್ಲ. ಭಾರತ ಶಾಂತಿ ಬಯಸುತ್ತೆ. ಹಾಗೆಯೇ ಪ್ರತ್ಯುತ್ತರ ನೀಡಲು ಬರುತ್ತೆ. ನಮ್ಮ ಶಕ್ತಿಯ ಬಗ್ಗೆ ಭ್ರಮೆ ಯಾವುದೇ ಅನುಮಾನಬೇಡ ಎಂದು ತಿಳಿಸಿದರು.

Key words: india-china- Conflict- soldiers -Prime Minister –PM- Narendra Modi