ಹೆಚ್ಚಾಯ್ತು ‘ಪ್ರೇಮಂ’ ಸಾಯಿ ಪಲ್ಲವಿ ಸಂಭಾವನೆ

Promotion

ಬೆಂಗಳೂರು, ಸೆಪ್ಟೆಂಬರ್ 17, 2020 (www.justkannada.in): ನಾನಿ ನಟನೆಯ ತೆಲುಗಿನ ‘ಶ್ಯಾಮ್ ಸಿಂಗ ರಾಯ್’ ಚಿತ್ರದಲ್ಲಿ ಸಾಯಿ ಪಲ್ಲವಿ ಭರ್ಜರಿ ಸಂಭಾವನೆ ಪಡೆದಿದ್ದಾರೆ.

ನಾಗ ಚೈತನ್ಯ ನಟನೆಯ ‘ಲವ್ ಸ್ಟೋರಿ’ ಮತ್ತು ರಾಣ ದಗ್ಗುಬಾಟಿ ನಾಯಕನಾಗಿರುವ ‘ವಿರಾಟಪರ್ವಂ’ ಚಿತ್ರಕ್ಕೂ ಸಾಯಿ ಪಲ್ಲವಿಯೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಭರ್ಜರಿ ಆಫರ್ ಗಳ ನಡುವೆ ಸಾಯಿ ಪಲ್ಲವಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಕಾಲ್‍ಶೀಟ್‍ಗೆ ಶೀಘ್ರವೇ ಸಹಿ ಹಾಕಲಿದ್ದು, ಈ ಚಿತ್ರದ ನಟನೆಗಾಗಿ ಆಕೆ 2 ಕೋಟಿ ರೂ ಸಂಭಾವನೆಯ ಬೇಡಿಕೆ ಇಟ್ಟಿದ್ದು, ಇದಕ್ಕೆ ನಿರ್ಮಾಪಕರು ಒಕೆ ಎಂದಿದ್ದಾರೆ ಎನ್ನಲಾಗಿದೆ.