ರಾಜ್ಯದ ಸಾಲ ಹೆಚ್ಚಾಗುತ್ತಿರುವುದಕ್ಕೆ ಯಡಿಯೂರಪ್ಪನವರು ಮಾತ್ರ ಕಾರಣರಲ್ಲ : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್

ಬೆಂಗಳೂರು,ಮಾರ್ಚ್,25,2021(www.justkannada.in) : ಕಳೆದ 70 ವರ್ಷದಿಂದ ಕನ್ನಡಿಗರು ಎಚ್ಚರ ತಪ್ಪಿರುವುದರಿಂದ ಕರ್ನಾಟಕ ಸರಕಾರ ದಿನದಿಂದ, ದಿನಕ್ಕೆ ಹೆಚ್ಚು, ಹೆಚ್ಚು ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಲು, ಯಡಿಯೂರಪ್ಪನವರು ಮಾತ್ರ ಕಾರಣರಲ್ಲ, ಎಲ್ಲವೂ ಕೇಂದ್ರೀಕಾರಣವಾಗುತ್ತಿದ್ದರೂ ಸಮ್ಮನಿರುವ ನಮ್ಮೆಲ್ಲಾ ಜನಪ್ರತಿನಿಧಿಗಳೂ ಕಾರಣ ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಹೇಳಿದರು.ಯಾವ ಕಾರಣಕ್ಕೆ ಜಿ ಎಸ್ ಟಿ ಮೋಸವಾಗುತ್ತಿದೆ ಅನ್ನೋ ವಿಚಾರ ಬಿ.ಎಸ್.ವೈ, ಸಿದ್ದರಾಮಯ್ಯ,ಎಚ್.ಡಿ.ಕುಮಾರಸ್ವಾಮಿ ಇವರೆಲ್ಲರಿಗೂ ತಿಳಿದ ವಿಚಾರ. ಕನ್ನಡ ನಾಡಿನ ಉಳಿವಿಗಾಗಿ, ಅಭಿವೃದ್ದಿಗಾಗಿ ಇಂದು ಈ ನಾಯಕರೆಲ್ಲರೂ ಒಂದಾಗಬೇಕಾದ ಸಮಯ ಬಂದಿದೆ. ಜಿ ಎಸ್ ಟಿ ‌ಇದ್ದಷ್ಟು ದಿನ ಅನ್ಯಾಯ ಮುಂದುವರೆಯಲಿದೆ ಎಂದಿದ್ದಾರೆ.

State tax,politicians,Delhi,grip,Until,development,state,impossible,Kannada,fighter,Arun Javagal

ಜಿ ಎಸ್ ಟಿ ಮೋಸದ ವಿಚಾರವಾಗಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಬದಲು, ಕರ್ನಾಟಕದ ಎಲ್ಲಾ ಜನಪ್ರತಿನಿಧಿಗಳೂ ಒಂದಾಗಿ ಜಿ ಎಸ್ ಟಿ ಯನ್ನು ತೆಗೆದು ಹಾಕಲು ಒತ್ತಾಯ ಮಾಡಬೇಕು. ತೆರಿಗೆಯ ಮೇಲಿನ ಸಂಪೂರ್ಣ ಹಿಡಿತ ರಾಜ್ಯ ಸರ್ಕಾರದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಜಿಎಸ್ ಟಿ ಯಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎನ್ನುವುದು ತಿಳಿದು ಮೋದಿಯವರು ಸಿಎಂ ಆಗಿದ್ದಾಗ ಜಿಎಸ್ ಟಿ ಯನ್ನು ವಿರೋಧಿಸಿದ್ದರು. ಜಯಲಲಿತ ಅವರು ಸಹ ಜಿಎಸ್ ಟಿ ಮಂಡಳಿಯ ಓಟಿನ ಬಗ್ಗೆ ವಿರೋಧಿಸಿದ್ದರು. ಆಗ ಸಿದ್ದರಾಮಯ್ಯನವರು ವಿರೋಧಿಸಿದ ಬಗ್ಗೆ ಎಲ್ಲೂ ಕಾಣಲಿಲ್ಲ. ಇಂದು ಜಿಎಸ್ ಟಿ ಮೋಸಕ್ಕೆ ಯಡಿಯೂರಪ್ಪನವರನ್ನು ಮಾತ್ರ ಗುರಿಯಾಗಿಸೋದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.

key words : increase-state-debt-Yeddyurappa-not-only-reason-Kannada-fighter-Arun Javagal