ಮೈಸೂರಿನಲ್ಲಿ  50ಕ್ಕೂ ಹೆಚ್ಚು ಕಂಟೈನ್ ಮೆಂಟ್ ಜೋನ್: ಇದು ನಮಗೂ ಕೂಡಾ ಚಾಲೆಂಜಿಂಗ್ ಟೈಂ ಎಂದ್ರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್..

ಮೈಸೂರು,ಜೂ,26,2020(www.justkannada.in): ಮೈಸೂರಿನಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕಂಟೈನ್ಮೆಂಟ್ ಜೋನ್ ಗಳನ್ನು ಮಾಡಲಾಗಿದೆ ಎಂದು ಮೈಸೂರು  ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್  ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಕಂಟೈನ್ಮೆಂಟ್ ಜೋನ್ ಗಳನ್ನು ಆಯಾ ಬೀದಿಗೆ ಮಾತ್ರ ಸೀಮಿತ ಮಾಡಲಾಗುತ್ತಿದೆ. ಅಪಾರ್ಟ್ ಮೆಂಟ್ ಹಾಗೂ ಸ್ಲಂ ಏರಿಯಾಗಳಲ್ಲಿ ಭಿನ್ನವಾಗಿ ಕಂಟೈನ್ಮೆಂಟ್ ಜೋನ್ ಮಾಡಲಾಗುತ್ತಿದೆ. ಜನರು ಇನ್ನಾದ್ರೂ ಹೆಚ್ಚೆತ್ತುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸ್ವಯಂ ಲಾಕ್ಡೌನ್ ಮಾಡಿಕೊಳ್ಳಬೇಕು. ಮದುವೆ, ಧಾರ್ಮಿಕ ಸಮಾರಂಭಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ಲಾಕ್ಡೌನ್ ಸಡಿಲಿಕೆ ಬಳಿಕ ಸೋಂಕಿನ ಸಂಖ್ಯೆ ಹೆಚ್ಚಾಗ್ತಿದೆ. ಸಮುದಾಯವಾಗಿ ಕೊರೋನಾ ಹರಡದ ರೀತಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಇದು ನಮಗೂ ಕೂಡಾ ಚಾಲೆಂಜಿಂಗ್ ಟೈಂ ಆಗಿದೆ.  ಜನರು ನಮಗೆ ಸಹಕರಿಸಿದ್ರೆ ಯಶಸ್ವಿಯಾಗಿ ಪರಿಸ್ಥಿತಿ ನಿಭಾಯಿಸುತ್ತೇವೆ ಎಂದು ಡಿಸಿ ಅಭಿರಾಂ ಜೀ ಶಂಕರ್ ತಿಳಿಸಿದರು.increase-corona-mysore-50-containment-zone-dc-abhiram-jee-shankar

ಮೈಸೂರಿನಲ್ಲಿ ಉತ್ತಮವಾಗಿ ಕೋವಿಡ್ ಆಸ್ಪತ್ರೆಯನ್ನ ನಿರ್ವಹಣೆ ಮಾಡುತ್ತಿದ್ದೇವೆ. ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಈಗಿರುವ ಕೋವಿಡ್ ಆಸ್ಪತ್ರೆಯ 250ಬೆಡ್ ಗಳು ಫಿಲ್ ಆಗಲಿವೆ. ಇಎಸ್ಐ ಆಸ್ಪತ್ರೆಯಲ್ಲಿ 100ಹಾಸಿಗೆ ವಾರ್ಡ್ ರೆಡಿ ಮಾಡಲಾಗಿದೆ. ಅಲ್ಲದೇ ಮಂಡಕಳ್ಳಿ ಬಳಿಯ ಕೆಎಸ್ಒಯು ಕಟ್ಟಡಲ್ಲೂ ಕೊರೊನಾಗೆ ಚಿಕಿತ್ಸೆ ನೀಡಲು ಸಿದ್ದ ಗೊಳಿಸಲಾಗುತ್ತಿದೆ. 500 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಇನ್ನೊಂದು ವಾರದಲ್ಲಿ ಸಿದ್ದವಾಗಲಿದೆ. ನಮಗೆ ಆಸ್ಪತ್ರೆ ವಿಚಾರದಲ್ಲಿ ಯಾವುದೇ ತೊಂದರೆಯಾಗಲ್ಲ, ಕೇವಲ ಸಿಬ್ಬಂದಿ ಕೊರತೆಯಾಗಬಹುದು ಅಷ್ಟೇ. ಅದರ ಬಗ್ಗೆಯೂ ಗಮನಹರಿಸಲಾಗುವುದು ಎಂದು ಡಿಸಿ ಅಭಿರಾಮ್ ಜಿ ಶಂಕರ್ ಹೇಳಿದರು.

Key words: Increase – Corona- Mysore-50 containment –zone-DC Abhiram Jee Shankar.