ಮಾ.12 ರಂದು ಪ್ರಧಾನಿ ಮೋದಿ ಅವರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ- ಸಂಸದ ಪ್ರತಾಪ್ ಸಿಂಹ.

Promotion

ಮೈಸೂರು,ಮಾರ್ಚ್,1,2023(www.justkannada.in):  ಮಾರ್ಚ್ 12ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಬೆಂಗಳೂರು ಹೆದ್ದಾರಿಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನ ಮಂಡಕಳ್ಳಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಂಡ್ಯ ಬಳಿ ಗೆಜ್ಜೆಲೆಗೆರೆ ಹೈವೇ ನಲ್ಲೇ  ಚಾಪರ್ ಲ್ಯಾಂಡ್ ಆಗಲಿದೆ. ಬಳಿಕ ಪಕ್ಕದಲ್ಲೇ ಸಾರ್ವಜನಿಕ  ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಅವರು ರೋಡ್ ಶೋ ನಡೆಸಲು ಅನುಮತಿ ಕೇಳಿದ್ದೇವೆ.SPG ಅವರು ಅವಕಾಶ ನೀಡಿದ್ರೆ ರೋಡ್ ಶೋ ಮಾಡುತ್ತೇವೆ. ಸದ್ಯ ಅವರ ಅನುಮತಿಗಾಗಿ ಕಾಯುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಅನುಮತಿ ನೀಡಬಹುದು ಎಂದರು.

ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಹೆದ್ದಾರಿಯ ಸರ್ವಿಸ್ ರಸ್ತೆ ಬಗ್ಗೆ ಕೆಲವರು ಹೈಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಈ ಹಿನ್ನೆಲೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ಕೆಲಸ ವಿಳಂಬವಾಗುತ್ತಿದೆ. ಸ್ಟೇ ತೆರವು ಬಗ್ಗೆ ವಕೀಲರ ಬಳಿ ಮಾತುಕತೆ ನಡೆಸಿದ್ದೇವೆ. ಆದಷ್ಟು ಬೇಗ ತಡೆಯಾಜ್ಞೆ ತೆರವುಗೊಳಿಸಿ ಸರ್ವಿಸ್ ರೋಡ್ ನಿರ್ಮಾಣ ಮಾಡುತ್ತೇವೆ ಎಂದರು.

Key words: Inauguration – Mysore-Bangalore -Highway – PM-Modi- March 12- Pratap simha