ಸದ್ಯ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಹೀಗಾಗಿ ಲಾಕ್ ಡೌನ್ ಸಡಿಲಿಕೆ: ಡಿಸಿಎಂ ಅಶ್ವಥ್ ನಾರಾಯಣ್

Promotion

ಮೈಸೂರು, ಮೇ 31, 2020 (www.justkannada.in): ಲಾಕ್ ಡೌನ್ ಗಿಂತ ಮುಂಚಿನ ಪರಿಸ್ಥಿತಿ ಸರಿ ಇರಲಿಲ್ಲ. ಆದ್ರೆ ಇದೀಗಾ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ಹೀಗಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಬೇಕಾಗುವ ಪಿಪಿಇ ಕಿಟ್ ಬೆಂಗಳೂರಿನಲ್ಲಿ ತಯಾರಾಗುತ್ತಿದೆ‌. ಕರ್ನಾಟಕ ಇತರ ರಾಜ್ಯಕ್ಕೆ ಮಾದರಿಯಾಗಿದೆ. ಟೆಸ್ಟಿಂಗ್ ಲ್ಯಾಬ್ ಗಳ ಸಂಖ್ಯೆ ಹೆಚ್ಚಾಗಿದೆ. ಐಸಿಯು ಹಾಗೂ ವೆಂಟಿಲೇಟರ್ ಗಳ ಸಂಖ್ಯೆ ಕೂಡ ಹೆಚ್ಚಿದೆ. ಈ ಕಾರಣದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದರೆ.

ವೈರಸ್ ಹೋಗಲ್ಲ ನಮ್ಮ ಜೊತೆಯಲ್ಲೆ ಇರಯತ್ತೆ‌ ಬೇರೆ ವೈರಸ್ ರೀತಿ ಇದು ಕೂಡ ಇರುತ್ತೆ‌. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಜೀವನ ಮಾಡಲು ಜೀವನಾಂಶಬೇಕು. ಇದಕ್ಕಾಗಿ ಲಾಕ್ ಡೌನ್ ಸಡಿಲಿಕೆ ಮಾಡಲೆ ಬೇಕಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.