ಕಾಂಗ್ರೆಸ್ ತಂದಿರುವ ಎಲ್ಲಾ ಬಿಲ್ ಗಳನ್ನ ಜಾರಿ ಮಾಡಿ, ನಾವು ಮಾತೇ ಆಡಲ್ಲ-ಸಚಿವ ಅರಗ ಜ್ಞಾನೇಂದ್ರಗೆ ಬಿ.ಕೆ ಹರಿಪ್ರಸಾದ್ ಟಾಂಗ್.

Promotion

ಬೆಂಗಳೂರು,ಸೆಪ್ಟಂಬರ್,15,2022(www.justkannada.in):  ವಿಧಾನಸಭೆಯಲ್ಲಿ ಮಂಡಿಸಿ ಈಗಾಗಲೇ ಅಂಗೀಕಾರ ಪಡೆದಿರುವ  ಮತಾಂತರ ನಿಷೇಧ ಕಾಯ್ದೆ ಇಂದು ವಿಧಾನಪರಿಷತ್ ನಲ್ಲಿ ಮಂಡನೆಯಾಯಿತು.

ಗೃಹ ಸಚಿವ ಅರಗ ಜ್ಞಾನೇಂದ್ರ ಮತಾಂತರ ನಿಷೇಧ ಕಾಯ್ದೆ ಬಿಲ್ ಮಂಡಿಸಿದರು. ಕಾಯ್ದೆಗೆ ಕಾಂಗ್ರೆಸ್ ವಿರೋಧಿಸಿರುವ ಹಿನ್ನೆಲೆ ಪರಿಷತ್ ನಲ್ಲಿ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ,   ಬಲವಂತ ಮತಾಂತರ ನಿಷೇಧ ಕಾಯ್ದ ನಾವು  ಜಾರಿ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಿಲ್ ತಂದಿತ್ತು ನಾವು ಜಾರಿ ಮಾಡಿದ್ದೇವೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್,  ಸಚಿವರಿಗೆ ಕಾಂಗ್ರೆಸ್ ತಂದ ಕಾಯ್ದೆಗಳ ಬಗ್ಗೆ ಗೌರವವಿದೆ. ಕಾಂಗ್ರೆಸ್ ತಂದಿರುವ ಎಲ್ಲಾ ಬಿಲ್ ಗಳನ್ನ ಜಾರಿ ಮಾಡಿ ನಾವು ಮಾತೇ ಆಡುವುದಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಟಾಂಗ್ ನೀಡಿದ ಸಚಿವ ಮಾಧುಸ್ವಾಮಿ,  ಯಾರನ್ನ ಓಲೈಸಲು ಇಷ್ಟು ಮಾತನಾಡಿದ್ದೀರೆಂದು ಗೊತ್ತಿದೆ. ಯಾಕೆ ಒಂದು ಸಮುದಾಯ ಮೇಲೇರಿಸಿ ಮಾತನಾಡುತ್ತೀರಿ  ಎಂದು ಪ್ರಶ್ನಿಸಿದರು. ಈ ಬಿಲ್ ಯಾಕೆ ಜಾರಿಗೆ ತರುತ್ತಿದ್ದೀರಿ ಎಂದು ನಮಗೂ ಗೊತ್ತು ಸಚಿವ ಮಾಧುಸ್ವಾಮಿಗೆ ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು.

Key words: Implement – bills-Congress-BK Hariprasad -Tong – Minister- Araga jnanendra.