ಐಎಂಎ ಬಹುಕೋಟಿ ವಂಚನೆ ಪ್ರಕರಣ; ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು ಮಂಜೂರು..

Promotion

ಬೆಂಗಳೂರು,ಅಕ್ಟೋಬರ್,28,2020(www.justkannada.in):  ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.jk-logo-justkannada-logo

ಇಡಿ ದಾಖಲಿಸಿದ್ಧ ಪ್ರಕರಣದಲ್ಲಿ ಒಂದುವರೆ ವರ್ಷದ ಬಳಿಕ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ಜಾಮೀನು ಸಿಕ್ಕಿದ್ದು ಜಾಮೀನು ಪಡೆಯಲು 5 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯ ನಾಶಪಡಿಸದಂತೆ ಕೋರ್ಟ್ ಸೂಚನೆ ನೀಡಿದೆ.ima-multi-crore-fraud-case-mansoor-khan-granted-bail

ಆರೋಪಿ ಮನ್ಸೂರ್ ಖಾನ್ ಗೆ  ಇಡಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ ಬಿಡಗಡೆ ಭಾಗ್ಯವಿಲ್ಲ.  ಹೌದು, ಸಿಬಿಐ ಕೇಸ್ ಬಾಕಿ ಇದ್ದು ಈ ಹಿನ್ನೆಲೆ ಮನ್ಸೂರ್ ಖಾನ್ ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.  ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಬಿಐ ದಾಖಲಿಸಲಾಗಿರುವಂತಹ ಪ್ರಕರಣದಲ್ಲಿ ಜಾಮೀನು ದೊರೆತಿಲ್ಲ.

Key words: IMA – multi-crore- fraud- case- Mansoor Khan- granted- bail