ಕಂದಾಯ ಇಲಾಖೆಯಿಂದ ಐಎಂಎ ಕಂಪನಿಯ ಆಸ್ತಿ ಮುಟ್ಟುಗೋಲು…

ಬೆಂಗಳೂರು,ಸೆ,25,2019(www.justkannada.in): ಐಎಂಎ ಕಂಪನಿಯಿಂದ ಹೂಡಿಕೆದಾರರಿಗೆ ವಂಚನೆ ಪ್ರಕರಣ ಸಂಬಂಧ,  ಐಎಂಎ ಕಂಪನಿಯ ಆಸ್ತಿಯನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಐಎಂಐ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ  ಕಂದಾಯ ಸಚಿವ ಆರ್ ಅಶೋಕ್ ಆದೇಶ ನೀಡಿದ್ದು, ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 12 ಆಸ್ತಿಗಳನ್ನ ಕಂದಾಯ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್,  ಐಎಂಎ ಕಂಪನಿಯ  21,73,68,205 ರೂ ಮೌಲ್ಯದ ಆಸ್ತಿಗಳನ್ನ ಜಪ್ತಿ ಮಾಡಲಾಗಿದೆ.  ಈ ವೇಳೆ 5880 ನಕಲಿ ಚಿನ್ನ ಬಿಸ್ಕೆಟ್ ಗಳು ಕೂಡ ಸಿಕ್ಕಿವೆ. 303 ಕೆ.ಜಿ ತೂಕದ ನಕಲಿ ಚಿನ್ನ ಕೂಡ ವಶಪಡಿಸಿಕೊಳ್ಳಲಾಗಿದ್ದು, ಅದನ್ನೂ ಸೀಜ್ ಮಾಡಿದ್ದೇವೆ. ಜತೆಗೆ 16 ಕಾರ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Key words: IMA company- property -seizure – Revenue Department