ಶಾಸಕರು ಬಯಸಿದ್ರೆ ನಾನು ರಾಜೀನಾಮೆಗೆ ಸಿದ್ಧ- ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸ್ಪಷ್ಟನೆ.

Promotion

ಮುಂಬೈ,ಜೂನ್,22,2022(www.justkannada.in):  ಶಿವಸೇನಾ ಶಾಸಕರು ಬಯಸಿದರೇ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ,  ನಾವು 25 ವರ್ಷಗಳಿಂದ ಕಾಂಗ್ರೆಸ್ ಎನ್.ಸಿಪಿ ವಿರೋಧಿಸಿಕೊಂಡು ಬಂದವು. ಶರದ್ ಪವಾರ್, ಸೋನಿಯಾ ಗಾಂಧಿ ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಪ್ರಾಮಾಣಿಕವಾಗಿ ನಾನು ಕೆಲಸ ನಿರ್ವಹಿಸಿದ್ದೇನೆ. ಬಾಳಾ ಸಾಹೇಬರ ಆಶಯಗಳು ನಮ್ಮ ಜೊತೆ ಇವೆ. ಹಿಂದುತ್ವ ಶಿವಸೇನೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಶಿಂಧೆ ನನ್ನ ಜೊತೆ ನೇರವಾಗಿ ಮಾತನಾಡಲಿ ನಾನು ರಾಜೀನಾಮೆಗೆ ಸಿದ್ಧ.  ಶಾಸಕರು ಬಯಸಿದ್ರೆ ರಾಜೀನಾಮೆಗೆ ಸಿದ್ಧನಿದ್ದೇನೆ. ರಾಜೀನಾಮೆ ಪತ್ರ ಬರೆದಿಟ್ಟಿದ್ದೇನೆ .ನಿವೆಲ್ಲರೂ ಇಲ್ಲಿಗೆ ಬನ್ನಿ ಒಟ್ಟಿಗೆ ಹೋಗಿ ರಾಜೀನಾಮೆ ನೀಡೋಣ. ನೀವು ಎಲ್ಲೋ ಕುಳಿತು ಉದ್ಧವ್ ಠಾಕ್ರೆ ಸರಿಯಿಲ್ಲ ಎಂದ್ರೆ ಒಪ್ಪಲ್ಲ. ನನ್ನ ಮುಂದೆ ಕುಳಿತು ಕಾರ್ಯ ವೈಖರಿ ಸರಿ ಇಲ್ಲ ಅಂದ್ರೆ ರಾಜೀನಾಮೆ ನೀಡುತ್ತೇನೆ ಎಂದು ಉದ‍್ಧವ್ ಠಾಕ್ರೆ ತಿಳಿಸಿದ್ದಾರೆ.

Key words: I’m -ready – resign -Maharashtra CM -Uddhav Thackeray